ಶಿವಮೊಗ್ಗ : ಜಿಲ್ಲಾ ಸೈನಿಕ ಪುನರ್ವಸತಿ ಇಲಾಖೆ ಕಛೇರಿಯಲ್ಲಿ ಲಿಪಿಕ ಕಂ ಚಾಲಕ ಹುದ್ದೆಗೆ ಅನುಭವುಳ್ಳ ಮಾಜಿ ಸೈನಿಕರು ಹೊರ ಗುತ್ತಿಗೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಿದೆ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅರ್ಜಿದಾರರು ಸೇನೆಯಲ್ಲಿ ವಾಹನ ಪರವಾನಿಗೆ ಪಡೆದಿರುವ ಮತ್ತು ಸೇನಾ ವಾಹನ ಚಲಾಯಿಸಿದ ಚಾಲಕ ಪ್ರವೃತ್ತಯುಳ್ಳವರಾಗಿರಬೇಕು ಜೊತೆಗೆ ಸರ್ಕಾರದ ಮೋಟಾರು ಕಾಯಿದೆಯಡಿಯಲ್ಲಿ ದಿನಾಂಕ 01-03-2022 ರ ಮೊದಲು ಪಡೆದ ಲಘು ಮೋಟಾರು ವಾಹನದ ಪರವಾನಿಗೆ ಹೊಂದಿರಬೇಕು. ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರಬಾರದು.
ಆಸಕ್ತರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಕಛೇರಿಗೆ ಸ್ವಯಂ ಲಿಖಿತ ಅರ್ಜಿ ಮತ್ತು ಸ್ವವಿವರ ದೊಂದಿಗೆ ಮಾ. 11 ರೊಳಗಾಗಿ ಕಛೇರಿಯ ವೇಳೆಯಲ್ಲಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂ. ಸಂ. :08182-2200925 ಯನ್ನು ಕಛೇರಿಯ ವೇಳೆಯಲ್ಲಿ ಅಥವಾ ಇಮೇಲ್ soldiersshimoga@gmail.com ಮುಖಾಂತರ ಸಂಪರ್ಕಿಸುವುದು.
BREAKING:68,000 ಡಾಲರ್ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ‘ಬಿಟ್ ಕಾಯಿನ್’
ನನಗೆ ದೇಶವೇ ಮೊದಲು, ಅವರಿಗೆ ಕುಟುಂಬವೇ ಮೊದಲು: ವಿಪಕ್ಷಳಿಗೆ ತಿವಿದ ಪ್ರಧಾನಿ ನರೇಂದ್ರ ಮೋದಿ