ಮೈಸೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಬಿಜೆಪಿಯು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಮತ ಪಡೆಯಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
BREAKING : 2022 ರಲ್ಲಿ ‘ಪಾಕಿಸ್ತಾನ’ ಪರ ಘೋಷಣೆ ಕೂಗಿದ ಮಂಡ್ಯದ ‘ಬಿಜೆಪಿ’ ಕಾರ್ಯಕರ್ತ ಪೊಲೀಸ್ ವಶಕ್ಕೆ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ ಬೇರೆ ಯಾವುದೇ ವಿಚಾರಗಳು ಇಲ್ಲ. ಲೋಕಸಭೆ ಚುನಾವಣೆ ಬಂದಾಗ ಪಾಕ್, ಉಗ್ರರು ಅಂತ ಹೇಳುತ್ತಾರೆ. ಮತ ಪಡೆಯಲು ಪಾಕಿಸ್ತಾನ ಭಯೋತ್ಪಾದನ ವಿಚಾರ ತರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹುಂಡಿ ಹಣ ಮಸೀದಿ, ಚರ್ಚ್ ಗೆ ಕೊಡುತ್ತಾರೆಂದು ಸುಳ್ಳು ಹೇಳಿದ್ದರು. ಅದು ಸುಳ್ಳು ಎಂದು ಗೊತ್ತಿದ್ದರೂ ಕೆಲ ಮಾಧ್ಯಮ ಪ್ರಸಾರ ಮಾಡಿದ್ದವು.ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಬಿಜೆಪಿ ಮತ ಪಡೆಯಲು ಯತ್ನಿಸುತ್ತಿದೆ. ದೇಶದಲ್ಲಿ ಪ್ರತಿ ಬಾರಿಯೂ ಜನರನ್ನು ಪೆದ್ದರಾಗಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
BREAKING : ಕೋಲಾರದಲ್ಲಿ ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ : ಅತ್ಯಾಚಾರ ಶಂಕೆ
ಜನ ಎಚ್ಚೆತ್ತುಕೊಂಡಿದ್ದಾರೆ ಯಾರು ಸತ್ಯ ಹೇಳುತ್ತಾರೆಂದು ಅವರಿಗೂ ತಿಳಿದಿದೆ. ದೇಶದ ಜನತೆ ಸತ್ಯ ಹೇಳುವವರಿಗೆ ಮತ ಹಾಕುತ್ತಾರೆಂಬ ವಿಶ್ವಾಸವಿದೆ. ಅಲ್ಲದೆ ಮುಂದಿನ ಐದು ವರ್ಷಗಳವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.