ನವದೆಹಲಿ : ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನ ಸುಪ್ರೀಂಕೋರ್ಟ್ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸಧ್ಯ ಪ್ರಧಾನಿ ಮೋದಿಯವ್ರು ಕೂಡ ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ, “ಇಂದು ದೇಶದ ಉನ್ನತ ನ್ಯಾಯಾಲಯವು ಡಿಎಂಕೆ ಕುಟುಂಬದ ಸದಸ್ಯರೊಬ್ಬರಿಗೆ ಕಠಿಣ ಪ್ರಶ್ನೆಗಳನ್ನ ಕೇಳುವುದನ್ನ ನಾವು ನೋಡಿದ್ದೇವೆ. ಕೋಟ್ಯಂತರ ಜನರ ನಂಬಿಕೆಯನ್ನ ಅವಮಾನಿಸುವುದು ವಂಶಪಾರಂಪರ್ಯಗಳ ಗುರುತಾಗಿದೆ. ಸಾರ್ವಜನಿಕ ಭಾವನೆಗಳ ಬಗ್ಗೆ ಕಾಳಜಿ ವಹಿಸದವರು ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನ ಅಲಂಕರಿಸುತ್ತಿದ್ದಾರೆ” ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ದ್ರಾವಿಡ ಮುನ್ನೇತ್ರ ಕಳಗಂ (DMK) ನಾಯಕನನ್ನ ತರಾಟೆಗೆ ತೆಗೆದುಕೊಂಡಿತು, “ನೀವು ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಅನುಚ್ಛೇದ 25 ರ ಅಡಿಯಲ್ಲಿ ನೀವು ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಈಗ ನೀವು ಅನುಚ್ಛೇದ 32 ರ ಅಡಿಯಲ್ಲಿ (ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು) ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ? ನೀವು ಹೇಳಿದ್ದರ ಪರಿಣಾಮಗಳು ನಿಮಗೆ ತಿಳಿದಿಲ್ಲವೇ? ನೀವು ಸಾಮಾನ್ಯ ಜನರಲ್ಲ. ನೀವು ಮಂತ್ರಿಯಾಗಿದ್ದೀರಿ. ಇದರ ಪರಿಣಾಮಗಳನ್ನ ನೀವು ತಿಳಿದುಕೊಳ್ಳಬೇಕು ಎಂದಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಕಳೆದ ವರ್ಷ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡುವ ಮೂಲಕ ಭಾರಿ ವಿವಾದಕ್ಕೆ ಕಾರಣರಾಗಿದ್ದರು.
BREAKING : ‘ಚುನಾವಣಾ ಬಾಂಡ್’ಗಳ ಮಾಹಿತಿ ನೀಡಲು ಹೆಚ್ಚಿನ ಕಾಲಾವಕಾಶ ಕೋರಿ ‘ಸುಪ್ರೀಂ’ ಮೆಟ್ಟಿಲೇರಿದ ‘SBI’
BREAKING : ಫೆಮಾ ಪ್ರಕರಣ ; ಟಿಎಂಸಿ ನಾಯಕಿ ‘ಮಹುವಾ ಮೊಯಿತ್ರಾ’ಗೆ ‘ED’ಯಿಂದ ಹೊಸ ಸಮನ್ಸ್
ಬೆಂಗಳೂರಲ್ಲಿ ‘ನೋಂದಣಿ’ ಮಾಡಿಕೊಳ್ಳದ ‘ನೀರಿನ ಟ್ಯಾಂಕರ್’ಗಳು ಸೀಜ್ – ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ