ರಾಯಚೂರು: ಶ್ರೀಶೈಲದ ಮಲ್ಲಿಕಾರ್ಜನ ದೇವರ ಜಾತ್ರೆಗೆ ತೆರಳುವಂತ ಭಕ್ತರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 225 ಹೆಚ್ಚುವರಿ ವಿಶೇಷ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು. ಶ್ರೀಶೈಲ ಜಾತ್ರೆ -2024(ಶಿವರಾತ್ರಿ) ಶಿವರಾತ್ರಿ ಹಬ್ಬದ ಪ್ರಯುಕ್ತ ಮಲ್ಲಿಕಾರ್ಜುನ ದೇವರ ಜಾತ್ರೆಗೆ ದಿನಾಂಕ 01.03-2024 ರಿಂದ 10-03-2024 ವರೆಗೆ 225 ಹೆಚ್ಚುವರಿ ವಿಶೇಷ ಬಸ್ಸುಗಳ ಕಾರ್ಯಾಚರಣೆ ಮಾಡಲಿದ್ದಾವೆ ಎಂದಿದೆ.
ಪ್ರಮುಖವಾಗಿ ರಾಯಚೂರು ವಿಭಾಗದಿಂದ 160 ಹಾಗೂ ಬಳ್ಳಾರಿ ವಿಭಾಗದಿಂದ 30 ಇತರೆ ವಿಭಾಗಗಳಿಂದ ಸೇರಿ ಒಟ್ಟು 225 ಹೆಚ್ಚುವರಿ ವಿಶೇಷ ಬಸ್ಸುಗಳ ಕಾರ್ಯಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದೆ.
ಎಲ್ಲಿಂದ ಎಷ್ಟು ಬಸ್ ಶ್ರೀಶೈಲಕ್ಕೆ ಸಂಚಾರ ಗೊತ್ತಾ.? ಇಲ್ಲಿದೆ ಡೀಟೆಲ್ಸ್
ರಾಯಚೂರು ಘಟಕ-2 30
ರಾಯಚೂರು ಘಟಕ-3 – 30
ಲಿಂಗಸುಗೂರು- 30 ಸಿಂಧನೂರು – 30
ಮಾನ್ವಿ -10
ದೇವದುರ್ಗ- 10
ಮಸ್ಕಿ – 20
ಬಳ್ಳಾರಿ -30
ಕಲಬುರಗಿ – 10
ಬಿಜಾಪುರ – 15
ಗಂಗಾವತಿ – 5
ಇತರೆ ವಿಭಾಗಗಳಿಂದ
ಒಟ್ಟು 225 ಹೆಚ್ಚುವರಿ ವಿಶೇಷ ಬಸ್ಸುಗಳು.
‘Modi ka parivar’: 2019 ರ ‘ಚೌಕಿದಾರ್’ ಅಭಿಯಾನದ ನಂತರ ಎಕ್ಸ್ ನಲ್ಲಿ ಬಿಜೆಪಿಯಿಂದ ಮತ್ತೊಂದು ಅಭಿಯಾನ ಶುರು!
‘ಬಸ್ ನಿಲ್ದಾಣ’ದಲ್ಲೇ ‘ಟೈಮರ್ ಫಿಕ್ಸ್’: ಇಲ್ಲಿದೆ ‘ಕೆಫೆ ಬ್ಲಾಸ್ಟ್’ ಕೊನೆಯ ’10 ನಿಮಿಷ’ದ ಕಂಪ್ಲೀಟ್ ಡೀಟೆಲ್ಸ್