ಬೆಂಗಳೂರು: ಮುಂಬರುವಂತ ಲೋಕಸಭಾ ಚುನಾವಣೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಮಂಜುನಾಥ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಆದರೇ ಈ ಕುರಿತಂತೆ ಅವರ ಮಾವ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಏನು ಹೇಳಿದ್ರು ಅಂತ ಮುಂದೆ ಓದಿ.
ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಡಾ.ಮಂಜುನಾಥ್ ಅವರು ಇಡೀ ದೇಶಾದ್ಯಂತ ತಮ್ಮದೇ ಆದಂತ ಹೆಸರು ಮಾಡಿದ್ದಾರೆ. ಮುಗಿಲೆತ್ತರಕ್ಕೆ ಹೆಸರು ಮಾಡಿರುವಂತ ಅವರು, ಈ ರಾಜಕೀಯ ಪರಿಸ್ಥಿತಿಯಲ್ಲಿ ಬರುವುದು ಸರಿಯಲ್ಲ. ಅವರಿಗೆ ಈಗ ಒಂದು ಒಳ್ಳೇ ಸ್ಥಾನವಿದೆ ಎಂಬುದಾಗಿ ತಿಳಿಸಿದರು.
ನಾನು ರಾಜಕೀಯ ಪ್ರವೇಶ ಮಾಡಿ ಅಂತ ಅವರನ್ನು ಈ ಸಮಯದಲ್ಲಿ ಒತ್ತಾಯ ಮಾಡುತ್ತಿಲ್ಲ. ನಾವು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ಮಾಡುವುದಿಲ್ಲ. ನಾನು ಅವರು ರಾಜಕೀಯಕ್ಕೆ ಬರೋದಕ್ಕೆ ಸಮ್ಮತಿ ಸೂಚಿಸುವುದಿಲ್ಲ ಅಂದುಕೊಂಡಿದ್ದೇನೆ ಎಂಬುದಾಗಿ ತಿಳಿಸಿದರು.
ಇನ್ನೊಂದು ವಾರದಲ್ಲಿ ಮೈತ್ರಿ ಸೀಟು ಹಂಚಿಕೆಯ ಬಗ್ಗೆ ತೀರ್ಮಾನ ಆಗಲಿದೆ. ಈ ಕುರಿತಂತೆ ಅಮಿತ್ ಶಾ ಹಾಗೂ ಜೆ.ಪಿ ನಡ್ಡಾ ಅವರು ಯಾವ ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡಲಿದ್ದಾರೆ. ಕುಮಾರಸ್ವಾಮಿ ಸ್ವರ್ಧೆ ವಿಚಾರವನ್ನು ಮೋದಿ, ಅಮಿತ್ ಶಾ ಕುಳಿತು ಚರ್ಚೆ ಮಾಡುತ್ತಾರೆ ಎಂದು ಹೇಳಿದರು.
‘Modi ka parivar’: 2019 ರ ‘ಚೌಕಿದಾರ್’ ಅಭಿಯಾನದ ನಂತರ ಎಕ್ಸ್ ನಲ್ಲಿ ಬಿಜೆಪಿಯಿಂದ ಮತ್ತೊಂದು ಅಭಿಯಾನ ಶುರು!
BIG BREAKING: ಇಸ್ರೋ ಮುಖ್ಯಸ್ಥ ಸೋಮನಾಥ್ ಗೆ ‘ಕ್ಯಾನ್ಸರ್’ ರೋಗ ಪತ್ತೆ!