ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬಿಹಾರದ ಬೆಗುಸರಾಯ್ ಜಿಲ್ಲೆಯಿಂದ ದೇಶಾದ್ಯಂತ ಸುಮಾರು 1.62 ಲಕ್ಷ ಕೋಟಿ ರೂ.ಗಳ ತೈಲ ಮತ್ತು ಅನಿಲ ವಲಯದ ಯೋಜನೆಗಳನ್ನು ಅನಾವರಣಗೊಳಿಸಿದರು.
ಈ ಯೋಜನೆಗಳು ಬಿಹಾರ, ಹರಿಯಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕದಂತಹ ವಿವಿಧ ರಾಜ್ಯಗಳಲ್ಲಿ ಹರಡಿವೆ. ದಾನಾಪುರ-ಜೋಗ್ಬಾನಿ ಎಕ್ಸ್ಪ್ರೆಸ್ (ದರ್ಭಂಗಾಸಕ್ರಿ ಮೂಲಕ) ಸೇರಿದಂತೆ ನಾಲ್ಕು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!
ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಗಮನಿಸಿ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಾ.7 ಕೊನೆಯ ದಿನ!
ಛತ್ತೀಸ್‌ಗಢ್‌ನಲ್ಲಿ ಪೊಲೀಸ್-ನಕ್ಸಲೀಯರ ಮಧ್ಯೆ ಗುಂಡಿನ ಚಕಮಕಿ, ಓರ್ವ ಯೋಧ ಹುತಾತ್ಮ!
ಜೋಗ್ಬಾನಿಯಿಂದ ಸಹರ್ಸಾ ಮತ್ತು ಸಿಲಿಗುರಿ ಮತ್ತು ಸೋನ್ಪುರ್-ವೈಶಾಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಾಯಿತು. ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆ.ಜಿ. ಜಲಾನಯನ ಪ್ರದೇಶದಿಂದ ಮೊದಲ ತೈಲವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ, ಒಎನ್ ಜಿಸಿ ಕೃಷ್ಣ ಗೋದಾವರಿ ಆಳವಾದ ನೀರಿನ ಯೋಜನೆಯಿಂದ ಮೊದಲ ಕಚ್ಚಾ ತೈಲ ಟ್ಯಾಂಕರ್ ಗೆ ಹಸಿರು ನಿಶಾನೆ ತೋರಿದರು.
ಅನಾವರಣಗೊಂಡ ಅಭಿವೃದ್ಧಿ ಯೋಜನೆಗಳು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ ಮತ್ತು ಬಿಹಾರದ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ದಾನಾಪುರ-ಜೋಗ್ಬಾನಿ ಎಕ್ಸ್ಪ್ರೆಸ್ (ದರ್ಭಾಂಗ-ಸಕ್ರಿ ಮೂಲಕ) ಸೇರಿದಂತೆ ನಾಲ್ಕು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಜೋಗ್ಬಾನಿಯಿಂದ ಸಹರ್ಸಾ ಮತ್ತು ಸಿಲಿಗುರಿ ಮತ್ತು ಸೋನ್ಪುರ್-ವೈಶಾಲಿ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಾಯಿತು.