ಮಂಗಳೂರು : ಪುತ್ತೂರು ನಿವಾಸಿ ದಿ.ಸತೀಶ್ ಹೆಬ್ಬಾರ್ ಪುತ್ರಿಯಾಗಿರುವ ಚೈತ್ರಾ ಹೆಬ್ಬಾರ್ ಫೆ.17ರಂದು ಪಿಜಿಯಿಂದ ಹೊರಹೋದಾಕೆ ಕಾಲೇಜಿಗೂ ತೆರಳದೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಈಗ ಕತಾರ್ ದೇಶಕ್ಕೆ ಹೋಗಿರುವುದು ತಿಳಿದು ಬಂದಿದೆ. ‘ನಾನು ಪ್ರಬುದ್ಧಳಾಗಿದ್ದೇನೆ. ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಕತಾರ್ನಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ್ದಾಳೆ.
BREAKING : ರಾಮನಗರದ ‘ಗ್ರೇಸ್ ಕಮ್ಯುನಿಟಿ’ ಚರ್ಚ್ ನಲ್ಲಿ ಅಗ್ನಿ ಅವಘಡ : ಕಿಡಿಗೇಡಿಗಳಿಂದ ಕೃತ್ಯ ಆರೋಪ
ಲವ್ ಜಿಹಾದ್ ಮಾಡಿದ್ದಾನೆ ಎನ್ನಲಾದ ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಶಾರೂಕ್ ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾರೂಕ್-ಚೈತ್ರಾ ಹೆಬ್ಬಾರ್ ಪ್ರೀತಿ ವಿಚಾರ ಬೆಳಕಿಗೆ ಬಂದಿದೆ. ತಾನು ಚೈತ್ರಾ ಹೆಬ್ಬಾರ್ ಪ್ರೀತಿಸುತ್ತಿರುವುದಾಗಿ ಶಾರೂಕ್ ಒಪ್ಪಿಕೊಂಡಿದ್ದಾನೆ. ಆದರೆ ಚೈತ್ರಾ ಹೆಬ್ಬಾರ್ ವಿಸಿಟಿಂಗ್ ವೀಸಾದಡಿ ದೇಶಬಿಟ್ಟು ಕತಾರ್ಗೆ ತೆರಳಿರುವುದು ದೃಢಪಟ್ಟಿದೆ. ಇದೀಗ ಅಲ್ಲಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಮಾಡಿದ್ದು, ನಾನು ಪ್ರಬುದ್ಧಳಾಗಿದ್ದು, ನನಗೆ ಪ್ರೀತಿಸುವ ಹಕ್ಕಿಲ್ಲವೇ? ಎಂದು ಪ್ರಶ್ನಿಸಿ ಮೇಲ್ ಮಾಡಿದ್ದಾಳೆ.
ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ‘ಏರುಪೇರು’ : ಬೆಳಗಾವಿಯ ‘KLE’ ಆಸ್ಪತ್ರೆಯಲ್ಲಿ ಚಿಕೆತ್ಸೆ
ನನಗೆ ಯಾವುದೇ, ಯಾರದೇ ಒತ್ತಡವಿಲ್ಲ ಸ್ವಇಚ್ಚೆಯಿಂದ ನನ್ನ ಇಷ್ಟದಂತೆ ನಾನು ಕತಾರ್ಗೆ ಬಂದಿದ್ದೇನೆ. ನನಗೆ ಬದುಕುವ ಹಕ್ಕಿಲ್ಲವೇ ಎಂದು ಪೊಲೀಸರಿಗೆ ಕಳುಹಿಸಿರುವ ಮೇಲ್ನಲ್ಲಿ ಪ್ರಶ್ನಿಸಿದ್ದಾಳೆ. ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿರೋ ಚೈತ್ರಾ. ಅಲ್ಲಿಂದ ದೆಹಲಿ ಏರ್ಪೋರ್ಟ್ ಗೆ ಆಗಮಿಸಿ ಕತಾರ್ ಗೆ ಪ್ರಯಾಣ ಮಾಡಿರೋದು ದೃಢಪಟ್ಟಿದೆ. ಶಾರೂಕ್ನಿಂದಲೇ ಚೈತ್ರಾ ಕತಾರ್ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.
Heart Failure Symptoms: ಹೃದಯಾಘಾತದ ಬಗ್ಗೆ ಬೆಳಿಗ್ಗೆ ನೀವು ಗುರುತಿಸದಿರುವ ಎಚ್ಚರಿಕೆಯ ಸಂಕೇತಗಳು ಹೀಗಿದೆ!
ಕೋಟೆಕಾರು ಮಾಡೂರು ಬಳಿ ಪಿಜಿಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್ಡಿ ಮಾಡುತ್ತಿದ್ದರು. ಇತ್ತ ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರೂಕ್ ಮಾಡೂರಿನಲ್ಲಿರುವ ಇವಳ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಸ್ಥಳೀಯರು ಈ ಸಂಗತಿಯನ್ನು ಬಜರಂಗದಳದ ಗಮನಕ್ಕೆ ತಂದಿದ್ದರು. ಪಿಜಿಯಲ್ಲಿ ವಿಚಾರಿಸಿದಾಗ ಹಿಂದೂ ವಿದ್ಯಾರ್ಥಿನಿಯರು ಇರುತ್ತಿದ್ದ ಪಿಜಿಯಲ್ಲಿ ಆತನೂ ಉಳಿಯುತ್ತಿದ್ದ ಎಂಬ ಸಂಗತಿ ಬಯಲಾಗಿತ್ತು. ಈ ಕುರಿತು ಆಕೆಯ ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.