ರಾಮನಗರ : ರಾಮನಗರದಲ್ಲಿ ಗ್ರೇಸ್ ಕಮ್ಯುನಿಟಿ ಚರ್ಚ್ ಗೆ ಬೆಂಕಿ ಬಿದ್ದಿದ್ದು, ಈ ಒಂದು ಅಗ್ನಿ ಅವಘಡದಲ್ಲಿ ಪ್ರಾರ್ಥನಾ ಪರಿಕರ, ಶಿಲುಬೆ ಸೇರಿದಂತೆ ಯೇಸುವಿನ ಮೂರ್ತಿಗಳು ಸುಟ್ಟು ಹೋಗಿವೆ.
ಈ ಒಂದು ಬೆಂಕಿ ದುರಂತದಲ್ಲಿ ಪ್ರಾರ್ಥನಾ ಮಂದಿರದ ಒಳಗಿರುವ ಎಲ್ಲಾ ಪರಿಕರಗಳು ಯೇಸುವಿನ ಶಿಲುಬೆ ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಚರ್ಚ್ ಸಿಬ್ಬಂದಿ ಆರೋಪಿಸುತ್ತಿದ್ದೂ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಚರ್ಚ್ ಸಿಬ್ಬಂದಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Heart Failure Symptoms: ಹೃದಯಾಘಾತದ ಬಗ್ಗೆ ಬೆಳಿಗ್ಗೆ ನೀವು ಗುರುತಿಸದಿರುವ ಎಚ್ಚರಿಕೆಯ ಸಂಕೇತಗಳು ಹೀಗಿದೆ!
ಪ್ರತಿ ರವಿವಾರ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಬಂದ ಭಕ್ತರು ಸುಟ್ಟ ಚರ್ಚ್ ನೋಡಿ ಕಣ್ಣೀರಿಟ್ಟಿದ್ದಾರೆ. ಶುಕ್ರವಾರದಂದೇ ಚರ್ಚ್ಗೆ ಕಿಡಿಗೇಡಿಗು ಬೆಂಕಿ ಹಚ್ಚಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಿಡಿಗೇಡಿಗಳ ಮೇಲೆ ಕ್ರಮ ವಹಿಸುವಂತೆ ಚರ್ಚ್ ಸಿಬ್ಬಂದಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಚರ್ಚ್ ಸುಟ್ಟು ಹೋಗಿರುವ ವಿಡಿಯೋ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಘಟನೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚರ್ಚ್ಗೆ ಹೇಗೆ ಬೆಂಕಿ ಬಿತ್ತು ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ‘ಏರುಪೇರು’ : ಬೆಳಗಾವಿಯ ‘KLE’ ಆಸ್ಪತ್ರೆಯಲ್ಲಿ ಚಿಕೆತ್ಸೆ