ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮನೆ ಕುಸಿದು ಎರಡು ತಿಂಗಳ ಮಗು, ತಾಯಿ ಮತ್ತು ಇತರ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಮಹೋರ್ ಉಪವಿಭಾಗದ ಚಸ್ಸಾನಾ ಗ್ರಾಮದಿಂದ ಈ ಘಟನೆ ವರದಿಯಾಗಿದೆ ಎಂದು ರಿಯಾಸಿ ಜಿಲ್ಲಾಧಿಕಾರಿ ವಿಶೇಷ್ ಪಾಲ್ ಮಹಾಜನ್ ಹೇಳಿದ್ದಾರೆ.
JEE Main 2024: ನಾಳೆ ಸೆಷನ್ 2 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ,!
‘ಐವರಿ ಕೋಸ್ಟ್‌ನಲ್ಲಿ’ ಭಾರತೀಯ ದಂಪತಿಗಳು ಶವವಾಗಿ ಪತ್ತೆ: ಕುಟುಂಬದ ಬೆಂಬಲಕ್ಕೆ ನಿಂತ ರಾಯಭಾರ ಕಚೇರಿ
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ: ಕಾರ್ಯಸೂಚಿಯಲ್ಲಿ ಏನಿದೆ?
ನಿರಂತರ ಮಳೆಯಿಂದಾಗಿ ಕುಂದರ್ಧನ್ ಚಸ್ಸಾನಾದಲ್ಲಿನ ಕಚಾ ಮನೆಗೆ ಭಾರಿ ಭೂಕುಸಿತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಕಾಶ್ಮೀರ ನ್ಯೂಸ್ ಅಬ್ಸರ್ವರ್ (ಕೆಎನ್ಒ) ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಭೂಕುಸಿತದಿಂದ ತಾಯಿ ಮತ್ತು ಆಕೆಯ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮೃತರನ್ನು 30 ವರ್ಷದ ಫಲ್ಲಾ ಅಖ್ತರ್ ಮತ್ತು ಅವರ ಮೂವರು ಪುತ್ರಿಯರಾದ 5 ವರ್ಷದ ನಸೀಮಾ ಅಕ್ಟರ್, 3 ವರ್ಷದ ಸಫೀನ್ ಕೌಸರ್ ಮತ್ತು 2 ತಿಂಗಳ ಸಮ್ರೀನ್ ಕೌಸರ್ ಎಂದು ಗುರುತಿಸಲಾಗಿದೆ.