ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಈ ಒಂದು ಪ್ರಕರಣ ನಮ್ಮ ಪೊಲೀಸರಿಗೆ ಹಾಗೂ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.
BREAKING : ಲಾಡ್ಲೆ ಮಾಶಾಕ್ ದರ್ಗಾ ವಿವಾದ : ‘ರಾಘವ ಚೈತನ್ಯ’ ರಥಯಾತ್ರೆಗೆ ಷರತ್ತು ಬದ್ಧ ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆರೋಪಿ ಪತ್ತೆಗಾಗಿ ಈಗಾಗಲೇ ಎಂಟು ತಂಡಗಳನ್ನು ರಚನೆ ಮಾಡಲಾಗಿದೆ.ಘಟನೆ ಹಿಂದೆ ಯಾವುದಾದರು ಸಂಘಟನೆಯ ಕೈವಾಡ ಇದೆಯಾ? ಎಂಬುದರ ಕುರಿತು ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖ ಸಂಸ್ಥೆಗಳು ಇದೀಗ ಸಂಪೂರ್ಣವಾದ ಮಾಹಿತಿಯನ್ನು ಪಡೆದಿವೆ.
FSL ವರದಿ ಕೂಡ ಬರಬೇಕಿದೆ.ನಮ್ಮ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಇದೊಂದು ಸವಾಲಾಗಿದೆ.ಎಲ್ಲಾ ಆಯಾಮಗಳಲ್ಲೂ ಕೂಡ ಸಂಪೂರ್ಣವಾಗಿ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಪ್ರಕರಣಕ್ಕೆ ಸಂಬಂಧಿಸಿದಂತಹ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
2023 ರ ‘ಆಂಧ್ರ ರೈಲು ಅಪಘಾತ’:ಮೊಬೈಲ್ ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಚಾಲಕ : ಸಚಿವ ಅಶ್ವಿನಿ ವೈಷ್ಣವ್
ನಮ್ಮ ಸರ್ಕಾರ ಎಂತಹದಕ್ಕೆಲ್ಲ ಸೊಪ್ಪು ಹಾಕಲ್ಲ ಎಂಬ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆಗೆ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ನಾನು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಕೊಡುವ ಹೇಳಿಕೆ ಮಾತ್ರ ಅಧಿಕೃತವಾಗಿದೆ ಸಚಿವ ಪ್ರಕಾಶ್ ಪಾಟೀಲ್ ಗೆ ಮಾಹಿತಿ ಇಲ್ಲದಿರಬಹುದು ಗೃಹ ಸಚಿವರಾದ ನನಗೆ ಮುಖ್ಯಮಂತ್ರಿಗೆ ಟೆಕ್ನಿಕಲ್ ಮಾಹಿತಿ ಇರುತ್ತದೆ ಅಲ್ಲದೆ ಬೇರೆಯವರು ಕೊಡುತ್ತಿರುವ ಹೇಳಿಕೆಯನ್ನು ಕೂಡ ನಾನು ಗಮನಿಸಿದ್ದೇನೆ ಹಾಗೆಲ್ಲ ಎಲ್ಲರ ಹೇಳಿಕೆಗಳನ್ನು ಅಧಿಕೃತ ಎಂದು ಪರಿಗಣಿಸಬೇಡಿ ಎಂದು ಬೆಂಗಳೂರಿನಲ್ಲಿ ಜಿ ಪರಮೇಶ್ವರ್ ತಿಳಿಸಿದರು.