ಬೆಂಗಳೂರು : ಪತ್ನಿಗೆ ಉದ್ಯೋಗ ಮಾಡುವ ಸಾಮರ್ಥ್ಯವಿದ್ದರೂ ಮಾಡುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ, ಹಾಗಾಗಿ ಆಕೆಗೆ ನಾನು ಜೀವನಾಂಶ ಕೊಡುವುದಿಲ್ಲ ಎಂಬ ಪತಿಯ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಹಾಸನದಲ್ಲಿ ‘ದಲಿತ’ ವ್ಯಕ್ತಿಯ ಮೇಲೆ ಕಲ್ಲು ತೂರಾಟ: ಬೈಕ್ ಗೆ ಬೆಂಕಿ ಹಚ್ಚಿ ಆರೋಪಿಗಳು ಪರಾರಿ
ದಂಪತಿಗಳಿಬ್ಬರು 2012ರಲ್ಲಿ ಮದುವೆಯಾಗಿದ್ದು, 11 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಆಕೆ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲ ಮಗುವಾದ ನಂತರ ಉದ್ಯೋಗವನ್ನು ತ್ಯಜಿಸಿದ್ದರು. ಆ ನಂತರ ಮತ್ತೊಂದು ಮಗುವಾಯಿತು.
US Election 2024:ಮೂರು ರಾಜ್ಯಗಳಲ್ಲಿ ಯುಎಸ್ ಮಾಜಿ ಅಧ್ಯಕ್ಷ ‘ಡೊನಾಲ್ಡ್ ಟ್ರಂಪ್’ಗೆ ಭರ್ಜರಿ ಗೆಲುವು
ಹಾಗಾಗಿ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ. ಎರಡು ಮಕ್ಕಳಾದ ನಂತರ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ಪರಸ್ಪರ ದೂರವಾದರು. ಪರಸ್ಪರ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರಡಿ ಪ್ರತಿ ತಿಂಗಳು 36 ಸಾವಿರ ಮಧ್ಯಂತರ ಜೀವನಾಂಶ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಪತಿಯಾದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದು ಖಾಸಗಿ ಉದ್ಯೋಗಗಳಂತೆ ಯಾವಗ ಬೇಕಾದರೂ ತೆಗೆದುಹಾಕುವಂತಹ ಉದ್ಯೋಗವಲ್ಲ. ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗವಾಗಿದೆ. ಅವರು ಸದ್ಯ ಸುಮಾರು 90 ಸಾವಿರ ಆದಾಯ ಗಳಿಸುತ್ತಿದ್ದಾರೆ. ಹಾಗಾಗಿ ಅವರು ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ಜೀವನಾಂಶ ನೀಡಬೇಕು ಎಂದು ಪೀಠ ತಿಳಿಸಿದೆ.