ಬಳ್ಳಾರಿ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿರುವ ಅನುಪಯುಕ್ತ ಪೀಠೋಪಕರಣಗಳ ಮಾರಾಟ ಮಾಡಲಾಗುತ್ತಿದ್ದು, ಖರೀದಿಸಲು ಇಚ್ಛಿಸುವವರು ದರಪಟ್ಟಿ ಸಲ್ಲಿಸಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾಯ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಆದಪ್ಪ ರಾಮಪ್ಪ ಜುಮಾಲಾಪುರ ಅವರು ತಿಳಿಸಿದ್ದಾರೆ.
*ಮಾರಾಟಕ್ಕಿರುವ ಅನುಪಯುಕ್ತ ಪೀಠೋಪಕರಣಗಳು:*
ಎಸ್-ಟೈಪ್ ಚೇರ್ 02, ಎಕ್ಸೂಕ್ಯೂಟೀವ್ ಚೇರ್ 06, ಕಂಪ್ಯೂಟರ್ ಚೇರ್ 03, ಟೇಬಲ್ ಟ್ರೇ 07, ಬಜಾಜ್ ಏರ್ ಕೂಲರ್ಸ್ 02, ಟೈಪ್ ರೈಟರ್ಸ್ (ಕನ್ನಡ, ಇಂಗ್ಲೀಷ್) 02, ಡಸ್ಟ್ ಬಿನ್ (ಐರನ್) 02, ಸ್ಟೀಲ್ ಚೇರ್ಸ್ 02, ರೆಡ್ ಎಸ್-ಟೈಪರ್ ಚೇರ್ 04.
ಖರೀದಿಸಲು ಇಚ್ಛಿಸುವವರು ಮಾ.14ರ ಸಂಜೆ 5 ಗಂಟೆಯೊಳಗೆ ದರಪಟ್ಟಿ ತಯಾರಿಸಿ ಇದೇ ಕಚೇರಿಗೆ ನೀಡಬಹುದು. ಯಾವ ಧರದಲ್ಲಿ ಎಂದು ಪ್ರತ್ಯೇಕವಾಗಿ ನಮೂದಿಸಬೇಕು. ಖರೀದಿಸಲು ಇಚ್ಛೆಪಡುತ್ತೀರಿ ಎಂಬುದರ ಬಗ್ಗೆ ಸೀಲ್ ಮಾಡಿದ ಲಕೋಟೆಯಲ್ಲಿ ದರಪಟ್ಟಿಯನ್ನು ಮತ್ತು ಲಕೋಟೆಯ ಮೇಲೆ ಹಳೆಯ ಅನುಪಯುಕ್ತ ಪೀಟೋಪಕರಣಗಳ ಖರೀದಿಗಾಗಿ ಧರಪಟ್ಟಿ ಎಂಬುದಾಗಿ ನಮೂದಿಸಬೇಕು. ಹೆಚ್ಚಿನ ದರ ನಮೂದಿಸುವ ದರಪಟ್ಟಿಯನ್ನು ಅಂಗೀಕರಿಸಲಾಗುವುದು.
ಹಳೆಯ ಅನುಪಯುಕ್ತ ಪೀಠೋಪಕರಣಗಳು ಎಲ್ಲಿ ಹೇಗಿದೆಯೋ ಅದೇ ಸ್ಥಿತಿಯಲ್ಲಿಯೇ ಮಾರಾಟ ಮಾಡಲಾಗುವುದು.
ಖರೀದಿಸಲು ಆಸಕ್ತಿಯುಳ್ಳವರು ಕಚೇರಿಯ ಸಮಯದಲ್ಲಿ ಖುದ್ದಾಗಿ ಭೇಟಿ ನೀಡಿ ಸಾಮಾಗ್ರಿಗಳನ್ನು ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.