ಬಳ್ಳಾರಿ: 2024 ರ ಲೋಕಸಭಾ ಲೋಕಸಭಾ ಚುನಾವಣೆಯ ಸಂಬಂಧ ಜಿಲ್ಲೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಮತ್ತು ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಹಾಗೂ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ನೈಜ ಮತದಾನದ ಅರಿವು ಮತ್ತು ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್ ಸಮಿತಿಯ ಪ್ರಮುಖ ಕರ್ತವ್ಯವಾಗಿದೆ. ಪ್ರಯುಕ್ತ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳನ್ನು ವ್ಯವಸ್ಥಿಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸ್ವೀಪ್ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದು, ಕಾರ್ಯ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. *ಅಧಿಕಾರಿಗಳು ಮತ್ತು ಕಾರ್ಯಹಂಚಿಕೆ:* ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕರು, ಜಿಲ್ಲಾ ಸ್ವೀಪ್ ಸಮಿತಿಗೆ ಸದಸ್ಯ ಕಾರ್ಯದರ್ಶಿಗಳಾಗಿದ್ದು, ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವುದು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ಸದಸ್ಯರಿಗೆ ಸೂಕ್ತ ನಿರ್ದೇಶನ ನೀಡುವುದಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇವರು ಸದಸ್ಯರಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ವೀಪ್ ಕಾಯಕ್ರಮಗಳನ್ನು ಹಮ್ಮಿಕೊಂಡು ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಇವರು, ಎಲ್ಲಾ ತಾಲ್ಲೂಕಿನ ಎಲ್ಲಾ ಇಲಾಖೆಗಳು ಕೈಗೊಳ್ಳುವ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದು. ಎಲ್ಲಾ ಇಲಾಖೆಗಳು ಸಲ್ಲಿಸಿರುವ ಮಾಹಿತಿಯನ್ನು ಕ್ರೂಢೀಕರಿಸಿ ಜಿಲ್ಲಾ ಪಂಚಾಯತ್ ಸಲ್ಲಿಸುವುದು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇವರು, ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವೀಪ್ ಕಾಯಕ್ರಮಗಳನ್ನು ಹಮ್ಮಿಕೊಂಡು ಛಾಯಾ ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಜಿಲ್ಲೆಯಲ್ಲಿ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳುವ ಸ್ವೀಪ್ ಕಾರ್ಯಕ್ರಮಗಳನ್ನು ನಡೆಸಿ ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು.
ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಜಿಲ್ಲೆಯ ಎಲ್ಲಾ ಬಿ.ಎಡ್, ಡಿ.ಎಡ್ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಕೈಗೊಂಡು ಛಾಯಾಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು (ಪ್ರಬಂಧ ಸ್ಪರ್ಧೆ, ಡಿಬೆಟ್, ರಂಗೋಲಿ ಸ್ಪರ್ಧೆ, ಕೊಲೇಜ್ ಮೇಕಿಂಗ್, ಪತ್ರ ಅಭಿಯಾನ, ಕ್ವಿಜ್ ಇತ್ಯಾದಿ).
ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳು, ತಮ್ಮ ಇಲಾಖೆ ಹಾಗೂ ಜಿಲ್ಲೆಯ ನೆಹರು ಯುವ ಕೇಂದ್ರ, ಎಲ್ಲಾ ಯುವಕ ಮಂಡಳಿಗಳೊಂದಿಗೆ ಸಮನ್ವಯ ಮಾಡಿಕೊಂಡು ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳನ್ನು ಕೈಗೊಂಡು ಛಾಯಾ ಚಿತ್ರ ಪ್ರತಿಯೊಂದಿಗೆ ದಿನಾಂಕವಾರು ವರದಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಸ್ವೀಪ್ ಸಮಿತಿ ಇವರಿಗೆ ಸಲ್ಲಿಸುವುದು.ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು, ಎಲ್ಲಾ ಇಲಾಖೆಗಳು ಕೈಗೊಳ್ಳುವ ಸ್ವೀಪ್ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದು ಪ್ರತಿನಿತ್ಯ ಪತ್ರಿಕೆಗಳಲ್ಲಿ ಪ್ರಚಾರ ಮಾಡುವುದು.
ಎಲ್ಲಾ ಸಮಿತಿ ಸದಸ್ಯರು ತಮಗೆ ವಹಿಸಿದ ಕಾರ್ಯಹಂಚಿಕೆ ವ್ಯಾಪ್ತಿಯಲ್ಲಿ ನಡೆಸುವ ಸ್ವೀಪ್ ಚಟುವಟಿಕೆಗಳ ಕುರಿತು ಕ್ರಿಯಾ ಯೋಜನೆಯನ್ನು ತಯಾರಿಸಿ ಅದರಂತೆ ಪ್ರತಿನಿತ್ಯ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಇಲಾಖಾ ಅಧಿಕಾರಿಗಳು ಆಲ್ಬಂ ತಯಾರಿಸಿ ತಮ್ಮ ಇಲಾಖೆಯಲ್ಲಿ ಸಂರಕ್ಷಿಸಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.