ಬೆಂಗಳೂರು: ನಗರದಲ್ಲಿ ಕೆರೆಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬೆಂಗಳೂರಲ್ಲಿ ಕೆರೆ ನಿರ್ವಣೆಗಾಗಿ ಬಿಬಿಎಂಪಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅದರಲ್ಲಿ ತೊಡಗಿಸಿಕೊಳ್ಳೋ ಅವಕಾಶವನ್ನು ನೀಡಲಾಗಿದೆ. ನೀವು ಬೆಂಗಳೂರಲ್ಲಿ ಕೆರೆ ರಕ್ಷಣೆ ಮಾಡೋ ಉದ್ದೇಶ ಹೊಂದಿದ್ದರೇ, ನಿಮಗೂ ಸುವರ್ಣಾವಕಾಶವಿದೆ. ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಬಿಬಿಎಂಪಿ ಮಾಹಿತಿ ನೀಡಿದ್ದು, ಬೆಂಗಳೂರಿನ ವ್ಯಾಪ್ತಿಯಲ್ಲಿ ಕೆರೆ ಮಿತ್ರರಾಗಲು ಈ ಹಿಂದೆ ಎರಡು ಬಾರಿ ಕೆರೆಗಳ ನಿರ್ವಹಣೆಯಲ್ಲಿ ನಾಗರೀಕರನ್ನು ಒಳಗೊಳ್ಳುವ ಉದ್ದೇಶದಿಂದ ಅಧಿಸೂಚನೆಯನ್ನು ಹೊರಡಿಸಿ ಆಸಕ್ತಿವುಳ್ಳ ನಾಗರೀಕರನ್ನು “ಕೆರೆ ಮಿತ್ರ” ಸ್ವಯಂಸೇವಕರಾಗಿ ನೊಂದಾಯಿಸಿಕೊಳ್ಳಲು ಕೋರಲಾಗಿತ್ತು. ಅದರಂತೆ 124 ಕೆರೆಗಳಿಗೆ ಈಗಾಗಲೇ ಕೆರೆ ಮಿತ್ರ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿರುತ್ತದೆ.
ಇನ್ನುಳಿದ ಕೆಲವು ಕೆರೆಗಳಿಗೆ ನಾಗರೀಕರು ನೊಂದಾಯಿಸದೇ ಇರುವುದರಿಂದ ಈ ಕೆರೆಗಳಿಗೆ ಹಾಗೂ ಕೆಲವು ಕೆರೆಗಳಿಗೆ ಕೇವಲ ಒಬ್ಬರು ನೊಂದಾಯಿಸಿರುವುದರಿಂದ ಒಟ್ಟಾಗಿ ಎಲ್ಲಾ ಕೆರೆಗಳಿಗೆ ನಾಗರೀಕರನ್ನು “ಕೆರೆ ಮಿತ್ರ” ಸ್ವಯಂ ಸೇವಕರನ್ನಾಗಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ.
ಅದರಂತೆ ಬೆಂಗಳೂರಿನ ನಿವಾಸಿಗಳು ಅವರು ವಾಸವಿರುವ ವಾರ್ಡ್ / ಸಮೀಪದಲ್ಲಿರುವ ಕೆರೆಗಳಿಗೆ ಅಸಕ್ತಿ ಇದ್ದಲ್ಲಿ ಕೆರೆ ನಿರ್ವಹಣೆ ಬಗ್ಗೆ ಪ್ರತಿನಿತ್ಯ ಪರಿಶೀಲಿಸಿ, ಅಂತರ್ಜಾಲದಲ್ಲಿ ವಿವರಗಳನ್ನು ದಾಖಲಿಸುವ ಮೂಲಕ ಸಾರ್ವಜನಿಕರ ಅವಶ್ಯಕತೆ ಹಾಗೂ ಕೆರೆಗಳ ಆಗೂ-ಹೋಗುಗಳನ್ನು ಇನ್ನು ಉತ್ತಮವಾಗಿ ನಿಗಾವಹಿಸಲು ಅನುವು ಮಾಡಿಕೊಳ್ಳುವ ಉದ್ದೇಶದಲ್ಲಿ ಸದಲ ಅಧಿಸೂಚನೆಯನ್ನು ಹೊರಡಿಸಲಾಗಿದೆ. ನೊಂದಾಯಿಸಬಹುದಾದ ಕೆರೆಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿರುತ್ತದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ನೀವು ಕೆರೆ ಮಿತ್ರರಾಗಲು ನೇರವಾಗಿ ಈ ಕೆಳಗಿನ ಲಿಂಕ್ ನಲ್ಲಿ ನೋಂದಾಯಿಸಿಕೊಳ್ಳಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನೆಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರೀಕರು “ಕೆರೆ ಮಿತ್ರ”ರಾಗಿ https://keremithra.bbmpgov.in/registration ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಜಯ್ ಕುಮಾರ್ ಹರಿದಾಸ್, ಮುಖ್ಯ ಅಭಿಯಂತರರು, ಕೆರೆಗಳ ವಿಭಾಗ, ಬಿಬಿಎಂಪಿ. ಮೊ.ಸಂ: 94806 83059ಗೆ ಸಂಪರ್ಕಿಸಬಹುದಾಗಿದೆ.