ಬೆಂಗಳೂರು: ಈವರೆಗೆ ಗ್ರಾಮ ಪಂಚಾಯ್ತಿ ಸೇವೆಗಳಿಗೆ ( Gramapanchayat Service ) ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿಸಲ್ಲಿಸಬೇಕಾಗಿತ್ತು. ಆದ್ರೇ ಈಗ ಗ್ರಾಮ ಪಂಚಾಯ್ತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳಗೊಳಿಸಲಾಗಿದೆ. ಅದೇನು ಅಂದ್ರೇ ಜಸ್ಟ್ ಈ ನಂಬರ್ ಗೆ ವಾಟ್ಸಾಪ್ ( WhatsApp ) ಮಾಡಿ ಸಾಕು. ಅದು ಹೇಗೆ ಅಂತ ಮುಂದೆ ಓದಿ.
ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭಿಸಲಾಗಿದೆ. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.
ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು, ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬಹುದು.
ವಾಟ್ಸಾಪ್ ಚಾಟ್ ಆರಂಭಿಸಲಾಗಿದ್ದು, 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.
“ಪಂಚಮಿತ್ರ” ಪೋರ್ಟಲ್ ಮೂಲಕ ಈ ಕೆಳಗಿನ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ.
1. ಚುನಾಯಿತ ಪ್ರತಿನಿಧಿಗಳ ವಿವರಗಳು
2. ಸಿಬ್ಬಂದಿಗಳ ವಿವರಗಳು
3. ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು
4. ಗ್ರಾಮ ಪಂಚಾಯತ್ಗಳ ಮುಂಬರುವ ಸಭೆಗಳ ಮಾಹಿತಿ
5. ಆದಾಯ ಸಂಗ್ರಹ ವಿವರಗಳು
6. ಸೇವೆಗಳ ವಿವರಗಳು
7. ಸ್ವ ಸಹಾಯ ಗುಂಪಿನ ವಿವರಗಳು
8. ಗ್ರಾಮ ಪಂಚಾಯತ್ಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು
9. 4 (1) (a) & 4 (1) (b) RTI ದಾಖಲೆಗಳು
ಈ ಕೆಳಗಿನ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ.
1. ಕಟ್ಟಡ ನಿರ್ಮಾಣ ಲೈಸೆನ್ಸ್
2. ಹೊಸ ನೀರು ಸರಬರಾಜು ಸಂಪರ್ಕ
3. ನೀರು ಸರಬರಾಜಿನ ಸಂಪರ್ಕ ಕಡಿತ
4. ಕುಡಿಯುವ ನೀರಿನ ನಿರ್ವಹಣೆ
5. ಬೀದಿ ದೀಪದ ನಿರ್ವಹಣೆ
6. ಗ್ರಾಮ ನೈರ್ಮಲ್ಯದ ನಿರ್ವಹಣೆ
7. ವ್ಯಾಪಾರ ಪರವಾನಗಿ
8. ಸ್ವಾಧೀನ ಪ್ರಮಾಣಪತ್ರ
9. ರಸ್ತೆ ಅಗೆವುದಾಕ್ಕಾಗಿ ಅನುಮತಿ
10. ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ
11. ನಿರಾಕ್ಷೇಪಣಾ ಪತ್ರ
12. MGNREGA ಅಡಿಯಲ್ಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ
13. ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು
14. ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿಸುವಿಕೆ
15. ಹೊಸ/ಅಸ್ತಿತ್ವದಲ್ಲಿರುವ ಓವರ್ಗ್ರೌಂಡ್ ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ/ನಿಯಮಿತಗೊಳಿಸುವಿಕೆ
16. ನಮೂನೆ 9/11ಎ
17. ನಮೂನೆ 11ಬಿ
ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಈ ಕೆಳಗಿನ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದುಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.
ಕ್ರ.ಸಂ ಕುಂದು ಕೊರತೆ ವಿಧ ಕುಂದು ಕೊರತೆ ವರ್ಗ ಕ್ರ.ಸಂ ಕುಂದು ಕೊರತೆ ವಿಧ ಕುಂದು ಕೊರತೆ ವರ್ಗ
1 ಜನನ, ಮರಣ ಮತ್ತು ನಿರ್ಜೀವ ಜನನ ಪ್ರಮಾಣ ಪತ್ರ ಒದಗಿಸುವುದು ಜನನ, ಮರಣ ಮತ್ತು ನಿರ್ಜೀವ ಜನನ ಪ್ರಮಾಣ ಪತ್ರದ ಪ್ರತಿಯನ್ನು ನೀಡುವಲ್ಲಿ ವಿಳಂಬ 40 ಕುಟುಂಬ ಪೋರ್ಟಲ್ ನಲ್ಲಿ ಕುಟುಂಬದ ನೊಂದಣಿ ಕುಟುಂಬ ಪೋರ್ಟಲ್ ನಲ್ಲಿ ನೊಂದಣಿ ಅರ್ಜಿಯನ್ನು ಇನ್ನೂ ಪರಿಶೀಲಿಸಿಲ್ಲ
2 ಜನನ, ಮರಣ ಮತ್ತು ನಿರ್ಜೀವ ಜನನ ಪ್ರಮಾಣ ಪತ್ರ ಒದಗಿಸುವುದು ಜನನ, ಮರಣ ಮತ್ತು ನಿರ್ಜೀವ ಜನನ ಪ್ರಮಾಣ ಪತ್ರದ ಪ್ರತಿ ನೀಡಲು ಅರ್ಜಿಯ ತಿರಸ್ಕಾರ 41 ಕುಟುಂಬ ಪೋರ್ಟಲ್ ನಲ್ಲಿ ಕುಟುಂಬದ ನೊಂದಣಿ ಕುಟುಂಬ ಪೋರ್ಟಲ್ ನಲ್ಲಿ ನೊಂದಣಿ ಅರ್ಜಿಯನ್ನು ಇನ್ನೂ ಅನುಮೋದಿಸಿಲ್ಲ
3 ಆಡಳಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರಿಂದ ಕರ್ತವ್ಯ ಲೋಪ 42 ಕುಡಿಯುವ ನೀರು ಸರಬರಾಜು ಅಸಮರ್ಪಕ / ಕಳಪೆ ಗುಣಮಟ್ಟದ ಸೇವೆ
4 ಆಡಳಿತ ಗ್ರಾ.ಪಂ. ಕಾರ್ಯದರ್ಶಿ ರವರಿಂದ ಕರ್ತವ್ಯ ಲೋಪ 43 ಕುಡಿಯುವ ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆ
5 ಆಡಳಿತ ದ್ವಿ.ದ.ಲೆ.ಸಹಾಯಕ ರವರಿಂದ ಕರ್ತವ್ಯ ಲೋಪ 44 ಕುಡಿಯುವ ನೀರು ಸರಬರಾಜು ಪೈಪ್ಲೈನ್ ಮತ್ತು ಸೋರಿಕೆ ಸಮಸ್ಯೆ
6 ಆಡಳಿತ ಗ್ರಾಮ ಪಂಚಾಯಿತಿ ಸಿಬ್ಬಂದಿ ರವರಿಂದ ಕರ್ತವ್ಯ ಲೋಪ 45 ಕುಡಿಯುವ ನೀರು ಸರಬರಾಜು 24 ಗಂಟೆ /55 ಲೀ ಪ್ರತಿ ವ್ಯಕ್ತಿಗೆ ನೀರು ಸರಬರಾಜು ಸಮಸ್ಯೆ
7 ಆಡಳಿತ ನಿಗದಿಪಡಿಸಿದಂತೆ ಗ್ರಾಮ ಸಭೆ ನಡೆಯುತ್ತಿಲ್ಲ 46 ಕುಡಿಯುವ ನೀರು ಸರಬರಾಜು ನೀರಿನ ಗುಣಮಟ್ಟದ ಸಮಸ್ಯೆ
8 ಆಡಳಿತ ನಿಗದಿಪಡಿಸಿದಂತೆ ವಾರ್ಡ್ ಸಭೆ ನಡೆಯುತ್ತಿಲ್ಲ 47 ಕುಡಿಯುವ ನೀರು ಸರಬರಾಜು ಘಟಕದ ಕಾಯಿನ್ ಬಾಕ್ಸ್ ಸಮಸ್ಯೆ
9 ಆಡಳಿತ ನಿಗದಿಪಡಿಸಿದಂತೆ ಸಾಮನ್ಯ ಸಭೆ ನಡೆಯುತ್ತಿಲ್ಲ 48 ಕುಡಿಯುವ ನೀರು ಸರಬರಾಜು ರೀಚಾರ್ಜ್ ಮತ್ತು ಪ್ರಿಪೇಯ್ಡ್ ಕಾರ್ಡ್ ಸಂಚಿಕೆ
10 ಆಡಳಿತ ನಿಗದಿಪಡಿಸಿದಂತೆ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ ನಡೆಯುತ್ತಿಲ್ಲ 49 ಕುಡಿಯುವ ನೀರು ಸರಬರಾಜು ವಾಲ್ಯೂಮೆಟ್ರಿಕ್ ನೀರು ಸರಬರಾಜು ಸಮಸ್ಯೆ
11 ಆಡಳಿತ ಗ್ರಾಮ ಪಂಚಾಯತಿಯ ಸಿಬ್ಬಂದಿ ಹುದ್ದೆಗಳು ಖಾಲಿ ಇರುವುದು 50 ನೈರ್ಮಲ್ಯವನ್ನು ಒದಗಿಸುವುದು ಸಾರ್ವಜನಿಕ ಶೌಚಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳು
12 ಆಡಳಿತ 15 ನೇ ಹಣ ಕಾಸು ಯೋಜನೆ ಅನುದಾನದಲ್ಲಿ ದುರುಪಯೋಗ 51 ನೈರ್ಮಲ್ಯವನ್ನು ಒದಗಿಸುವುದು ವೈಯಕ್ತಿಕ ಶೌಚಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳು
13 ಆಡಳಿತ ಸ್ವಂತ ಮೂಲದ ಆದಾಯ ಅನುದಾನದಲ್ಲಿ ದುರುಪಯೋಗ 52 ನೈರ್ಮಲ್ಯವನ್ನು ಒದಗಿಸುವುದು ಘನ ತ್ಯಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
14 ಆಡಳಿತ ರಾಜ್ಯ ಹಣ ಕಾಸು ಯೋಜನೆಯ ಅನುದಾನದಲ್ಲಿ ದುರುಪಯೋಗ 53 ನೈರ್ಮಲ್ಯವನ್ನು ಒದಗಿಸುವುದು ದ್ರವ ತ್ಯಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
15 ಆಸ್ತಿ ತೆರಿಗೆ ಪಾವತಿ ಪ್ರಸ್ತುತ ತೆರಿಗೆ ಬೇಡಿಕೆಯಲ್ಲಿ ಸಮಸ್ಯೆ 54 SHG/GPLF ಕುರಿತು SHG/GPLF ಗೆ ಸಂಬಂಧಿಸಿದ ಸಮಸ್ಯೆಗಳು
16 ಆಸ್ತಿ ತೆರಿಗೆ ಪಾವತಿ ಬಾಕಿ ತೆರಿಗೆಯಲ್ಲಿ ಸಮಸ್ಯೆ 55 ಮಹಾತ್ಮ ಗಾಂಧಿ ನರೇಗ ಕೂಲಿ ಪಾವತಿಯಲ್ಲಿ ವಿಳಂಬ
17 ಆಸ್ತಿ ತೆರಿಗೆ ಪಾವತಿ ತೆರಿಗೆ ದಂಡದಲ್ಲಿ ಸಮಸ್ಯೆ 56 ಮಹಾತ್ಮ ಗಾಂಧಿ ನರೇಗ ಸಾಮಗ್ರಿ ಮೊತ್ತ ಪಾವತಿಯಲ್ಲಿ ವಿಳಂಬ
18 ಆಸ್ತಿ ತೆರಿಗೆ ಪಾವತಿ ತೆರಿಗೆ ರಿಯಾಯತಿಯಲ್ಲಿ ಸಮಸ್ಯೆ 57 ಮಹಾತ್ಮ ಗಾಂಧಿ ನರೇಗ ಯಂತ್ರೋಪಕರಣಗಳ ಬಳಕೆ
19 ಆಸ್ತಿ ತೆರಿಗೆ ಪಾವತಿ ತೆರಿಗೆ ರಿಬೇಟ್ನಲ್ಲಿ ಸಮಸ್ಯೆ 58 ಮಹಾತ್ಮ ಗಾಂಧಿ ನರೇಗ ಕಳಪೆ ಕಾಮಗಾರಿ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ದೂರುಗಳು
20 ಆಸ್ತಿ ತೆರಿಗೆ ಪಾವತಿ ತೆರಿಗೆ ಲೆಕ್ಕಾಚಾರದಲ್ಲಿ ಸಮಸ್ಯೆ 59 ಮಹಾತ್ಮ ಗಾಂಧಿ ನರೇಗ ಹಾಜರಾತಿ ದಾಖಲು ಮಾಡಿರುವುದಿಲ್ಲ
21 ಕಟ್ಟಡ ನಿರ್ಮಾಣ ಪರವಾನಗೆ ಸೇವೆ ವಿತರಣೆಯಲ್ಲಿ ವಿಳಂಬ 60 ಮಹಾತ್ಮ ಗಾಂಧಿ ನರೇಗ ವೈಯಕ್ತಿಕ ಸೌಲಭ್ಯ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಪರಿಗಣಿಸಿರುವುದಿಲ್ಲ
22 ಕಟ್ಟಡ ನಿರ್ಮಾಣ ಪರವಾನಗೆ ಅರ್ಜಿಯ ತಿರಸ್ಕಾರ 61 ಮಹಾತ್ಮ ಗಾಂಧಿ ನರೇಗ ಸಮುದಾಯ ಕಾಮಗಾರಿಗೆ ಮನವಿ
23 ಬೀದಿ ದೀಪ ನಿರ್ವಹಣೆ ಬೀದಿ ದೀಪ ಕೆಲಸ ಮಾಡುತ್ತಿಲ್ಲ 62 ಮಹಾತ್ಮ ಗಾಂಧಿ ನರೇಗ ಜಾಬ್ ಕಾರ್ಡ್ ವಿಭಜನೆಗಾಗಿ ಮನವಿ
24 ಬೀದಿ ದೀಪ ನಿರ್ವಹಣೆ ಹೊಸ ಬೀದಿ ದೀಪದ ಅಳವಡಿಕೆ 63 ಮಹಾತ್ಮ ಗಾಂಧಿ ನರೇಗ ಜಾಬ್ ಕಾರ್ಡ್ನಲ್ಲಿ ಹೊಸ ಕೂಲಿಕಾರರ ಸೇರ್ಪಡೆ
25 ನಮೂನೆ 9/11A ಗ್ರಾಮ ಪಂಚಾಯಿತಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ 64 ಮಹಾತ್ಮ ಗಾಂಧಿ ನರೇಗ ಕೆಲಸದ ಬೇಡಿಕೆಗೆ(form 6) ಸ್ವೀಕೃತಿ ನೀಡಿಲ್ಲ
26 ಜನಗಣತಿ, ಬೆಳೆಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಒದಗಿಸುವುದು ಜನ ಗಣತಿ ವರದಿ ನೀಡುತ್ತಿಲ್ಲ 65 ಮಹಾತ್ಮ ಗಾಂಧಿ ನರೇಗ ಫಾರ್ಮ್ 6 ಅಂಗೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ಕೆಲಸವನ್ನು ಒದಗಿಸಿಲ್ಲ
27 ಜನಗಣತಿ, ಬೆಳೆಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಒದಗಿಸುವುದು ಜಾನುವಾರು ಗಣತಿ ವರದಿ ನೀಡುತ್ತಿಲ್ಲ 66 ಮಹಾತ್ಮ ಗಾಂಧಿ ನರೇಗ ಹೊಸ ಜಾಬ್ ಕಾರ್ಡ್ ಗಾಗಿ ಅರ್ಜಿ, ಸಕಾಲದಲ್ಲಿ ಸೇವೆ ಒದಗಿಸಿಲ್ಲ
28 ಜನಗಣತಿ, ಬೆಳೆಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಒದಗಿಸುವುದು ಬೆಳೆ ಗಣತಿ ವರದಿ ನೀಡುತ್ತಿಲ್ಲ 67 ಮಹಾತ್ಮ ಗಾಂಧಿ ನರೇಗ ಭ್ರಷ್ಟಾಚಾರದ ದೂರುಗಳು
29 ಜನಗಣತಿ, ಬೆಳೆಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳು ಒದಗಿಸುವುದು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳನ್ನು ನೀಡುತ್ತಿಲ್ಲ 68 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ಭಾರೀ ಮಳೆ ಅಥವಾ ಪ್ರವಾಹದಿಂದಾಗಿ ಹಾನಿಯಾಗಿರುವ ಸೇತುವೆ
30 ತೆರಿಗೆ ಬೇಡಿಕೆ ವಹಿ ಮ್ಯುಟೇಷನ್ ಮಾಡುತ್ತಿಲ್ಲ 69 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ಭಾರೀ ಮಳೆ ಅಥವಾ ಪ್ರವಾಹದಿಂದಾಗಿ ಹಾನಿಯಾಗಿರುವ ರಸ್ತೆ
31 ತೆರಿಗೆ ಬೇಡಿಕೆ ವಹಿ ತಿದ್ದಪಡಿ ಮಾಡುತ್ತಿಲ್ಲ 70 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪ್ರಗತಿ ಅಥವಾ ರಸ್ತೆ ಕಾಮಗಾರಿ ಆರಂಭಿಸಿ ಮಧ್ಯಂತರದಲ್ಲಿ ನಿಲ್ಲಿಸಲಾಗಿದೆ ಅಥವಾ ಕೈಬಿಡಲಾಗಿದೆ
32 ತೆರಿಗೆ ಬೇಡಿಕೆ ವಹಿ ಬೇಡಿಕೆ ವಹಿಯಲ್ಲಿ ಆಸ್ತಿಯನ್ನು ಸೇರಿಸದಿರುವುದು 71 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪ್ರಗತಿ ಅಥವಾ ಸೇತುವೆ ಕಾಮಗಾರಿ ಆರಂಭಿಸಿ ಮಧ್ಯಂತರದಲ್ಲಿ ನಿಲ್ಲಿಸಲಾಗಿದೆ ಅಥವಾ ಕೈಬಿಡಲಾಗಿದೆ
33 ಆಸ್ತಿ ಸಮೀಕ್ಷೆ ಮ್ಯಾನುವೆಲ್ ಸಮೀಕ್ಷೆ ಮಾಡಿರುವುದಿಲ್ಲ 72 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ಕಾಮಗಾರಿಯ ಗುಣಮಟ್ಟ ತೃಪ್ತಿಕರ ಅಥವಾ ಸಮಾಧಾನಕರವಾಗಿಲ್ಲ
34 ಆಸ್ತಿ ಸಮೀಕ್ಷೆ ಮ್ಯಾನುವೆಲ್ ಸಮೀಕ್ಷೆ ಸರಿಯಾಗಿ ಮಾಡಿರುವುದಿಲ್ಲ 73 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ಸೇತುವೆಯ ನಿರ್ವಹಣೆ ಸರಿಯಾಗಿಲ್ಲ
35 ಆಸ್ತಿ ಸಮೀಕ್ಷೆ ಆಸ್ತಿಗೆ ಸಂಬಂಧಿಸಿದ ಸಮಸ್ಯೆ 74 ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು ರಸ್ತೆ ನಿರ್ವಹಣೆ ಸರಿಯಾಗಿಲ್ಲ
36 ವಸತಿ ಅರ್ಜಿಯನ್ನು ತಿರಸ್ಕರಿಸಲಾಗಿದೆ 75 ಗ್ರಾಮದ ಆಂತರಿಕ ರಸ್ತೆಗಳು ಭಾರೀ ಮಳೆ ಅಥವಾ ಪ್ರವಾಹದಿಂದಾಗಿ ರಸ್ತೆ ಹಾಳಾಗಿದೆ
37 ವಸತಿ ಪೋಟೋ ಸೆರೆಹಿಡಿಯಲಾಗಿಲ್ಲ 76 ಗ್ರಾಮದ ಆಂತರಿಕ ರಸ್ತೆಗಳು ನಿಧಾನಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಪ್ರಗತಿ
38 ವಸತಿ ಪಾವತಿಯಲ್ಲಿ ವಿಳಂಬ 77 ಗ್ರಾಮದ ಆಂತರಿಕ ರಸ್ತೆಗಳು ಗ್ರಾಮದ ಆಂತರಿಕ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು
39 ವಸತಿ ಪೋಟೋ ಸೆರೆಹಿಡಿಯುವಲ್ಲಿ ವಿಳಂಬ 78 ಚರಂಡಿ, ಅಡ್ಡ ಮೋರಿ ಮತ್ತು ಕಲ್ವರ್ಟ್ ನಿಧಾನಗತಿಯಲ್ಲಿ ಸಾಗುತ್ತಿರುವ ಚರಂಡಿ ಅಥವಾ ಅಡ್ಡ ಮೋರಿ ಅಥವಾ ಕಲ್ವರ್ಟ್ ಕಾಮಗಾರಿ ಪ್ರಗತಿ