ಬೆಂಗಳೂರು : ನಿನ್ನೆ ಬೆಂಗಳೂರುನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿ ದೊರಕಿದ್ದು ಈತ ಕಳೆದ ಮೂರು ತಿಂಗಳಿನಿಂದ ಬಾಂಬ್ ಬ್ಲಾಸ್ಟ್ ಮಾಡಲು ತರಬೇತಿ ಪಡೆದಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. ಬಾಂಬ್ ಬ್ಲಾಸ್ಟ್ ಆರೋಪಿ ವೆಲ್ ಟ್ರೈನ್ಡ್ ಬಾಂಬರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಈ ಆರೋಪಿ ತನ್ನ ಸ್ಥಳದಿಂದ ಕುಂದಲ ಹಳ್ಳಿಯಿಂದ ಕಾಡುಗೋಡಿಗೆ ಬಿಎಂಟಿಸಿ ಯ ವೋಲ್ವೋ ಬಸ್ ನಲ್ಲಿ ಪ್ರಯಾಣ ಮಾಡಿದ್ದಾನೆ. ಶಂಕಿತ ಉಗ್ರ ಜಾಡು ಬೆನ್ನು ಬಿದ್ದಿರುವ ಸಿಸಿಬಿ ಬಿಎಂಟಿಸಿನಲ್ಲಿ ಶಂಕಿತ ಉಗ್ರ ಬಂದಿದ್ದ ಎನ್ನಲಾಗುತ್ತಿದೆ.
BREAKING:ಭಾರತ ಅಧಿಕೃತವಾಗಿ ‘ತೀವ್ರ ಬಡತನ’ ನಿರ್ಮೂಲನೆ ಮಾಡಿದೆ: ಯುಎಸ್ ವರದಿ
ಬಸ್ ನಂಬರ್ 335 E ರೂಟ್ ನಂಬರ್ ಬಸ್ ನಲ್ಲಿ ಉಗ್ರ ಪ್ರಯಾಣಿಸಿದ್ದಾನೆ. ಬಿಎಂಟಿಸಿ ಎಂಟ್ರಿ ಕೊಟ್ಟಿದ್ದಾನೆ ಕುಂದಲಹಳ್ಳಿ ಇಂದ ಕಾಡುಗೋಡಿಗೆ ಈ ಬಸ್ ದಿನಾಲು ಸಂಚರಿಸುತ್ತದೆ. ಹೀಗಾಗಿ ಸಿಸಿಬಿಯು 300 ಮೀಟರ್ ದಲ್ಲಿ ಉಗ್ರ ಸಂಚಾರಿಸಿರುವ ಹಿನ್ನೆಲೆಯಲ್ಲಿ ಸುತ್ತಲೂ ಇರುವ ಮುನ್ನೂರಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಗಳನ್ನು ಪರಿಶೀಲನೆ ನಡೆಸುತ್ತಿದೆ.
25 ಸಾವಿರ ‘ಅಗ್ನಿವೀರ್’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ !
ಹೌದು, ಬಂದಿದ್ದ ಶಂಕಿತ ಯಾರೆಂಬ ಮಾಹಿತಿ ಕಲೆ ಹಾಕುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದವನು ವೆಲ್ ಟ್ರೈನೈಡ್ ಬಾಂಬರ್ ಎಂಬ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಕೆಲವರ ಆಜ್ಞೆಯ ಮೇರೆಗೆ ಬಂದು ಸ್ಫೋಟ ಮಾಡಿದ್ದಾನೆ. ನಂತರ, ಕೆಲವರ ಆಜ್ಞೆಯ ನಂತರ ತನ್ನ ಕೆಲಸ ಮುಗಿಸಿ ವಾಪಸ್ ಆಗಿದ್ದಾನೆ. ಇನ್ನು ರಾಮೇಶ್ವರಂ ಕೆಫೆಗೆ ಬಾಂಬ್ ಇಡಲು ಮೂರು ತಿಂಗಳ ತಯಾರಿ ಕೂಡ ಮಾಡಿಕೊಂಡಿದ್ದಾನೆ.
1.25 ಕೋಟಿ ಭಾರತೀಯ ಮಕ್ಕಳಿಗೆ ಬೊಜ್ಜಿನ ಸಮಸ್ಯೆ: ಆತಂಕ ಮೂಡಿಸಿದ ಲ್ಯಾನ್ಸೆಟ್ ವರದಿ!
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಹೋಗುವಾಗ ಕಾಡುಗೋಡಿಗೆ ಹೊರಟಿದ್ದಾನೆ. ಈ ವೇಳೆ CMRIT ಕಾಲೇಜ್ ಬಸ್ಸ್ಟಾಪ್ ನಲ್ಲಿ ಇಳಿದು, ನಂತರ 300 ರಿಂದ 400ಮೀಟರ್ ನಡೆದುಕೊಂಡು ಹೋಗಿದ್ದಾನೆ. ಅಕ್ಕಪಕ್ಕದ ಸುಮಾರು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಬಸ್ ಸ್ಟಾಪ್ ನಲ್ಲಿ ಇಳಿದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಸುತ್ತಮುತ್ತಲ್ಲಿನ ಅಂಗಡಿ ಮಾಲೀಕರನ್ನು ಸಹ ಮಾಹಿತಿ ಪಡೆಯಲಾಗುತ್ತಿದೆ.
ಕೇವಲ ಟ್ರಾಫಿಕ್ ಪೊಲೀಸರು ಹಾಕಿರೋ ಸಿಸಿಟಿವಿ ಮಾತ್ರ ಇವೆ. ಆ ಬಸ್ ಸ್ಟಾಪ್ ಸಿಸಿಟಿವಿ ತೆಗೆದುಕೊಂಡು ಅಧಿಕಾರಿಗಳು ಪರಿಶೀಲನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಸುತ್ತಮುತ್ತಲಿನ ಯಾವುದೇ ಅಂಗಡಿ ಮುಗ್ಗಟ್ಟುಗಳಲ್ಲಿ ಯಾವುದೇ ಕ್ಯಾಮಾರಗಳೇ ಇಲ್ಲ. ಇದನ್ನು ನೋಡಿಕೊಂಡೇ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.