ಬೆಂಗಳೂರು : ನಿನ್ನೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಪ್ರಕರಣ ಕುರಿತಂತೆ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಮಂಗಳೂರಿನ ಕುಕ್ಕರ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ನೆನ್ನೆ ನಡೆದಿರುವಂತಹ ಸಾಮ್ಯತೆ ಇದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ ಎಂದು ಹೇಳಿದರು.
ಗಾಜಾದಲ್ಲಿ ಇಸ್ರೇಲಿ ಪಡೆಗಳಿಂದ 9,000 ಮಹಿಳೆಯರು ಕೊಲ್ಲಲ್ಪಟ್ಟಿದ್ದಾರೆ:ಆಘಾತ ವ್ಯಕ್ತಪಡಿಸಿದ ‘ವಿಶ್ವಸಂಸ್ಥೆ’
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. l ಬಿಜೆಪಿಯವರು ಏನಾದರೂ ಮಾತಾಡಿಕೊಳ್ಳಲಿ ಬೇಕಾಗಿಲ್ಲ. ಅವರು ಸಹಕಾರ ಕೊಟ್ರೆ ಸರಿ ಇಲ್ಲ ಅಂದ್ರೆ ರಾಜಕಾರಣ ಮಾಡುತ್ತಿದ್ದಾರೆ ಮಾಡ್ಲಿ ಎಂದು ಕಿಡಿ ಕಾರಿದರು.
ಚುನಾವಣಾ ಪ್ರಚಾರಕ್ಕಾಗಿ ಪ್ರಾರ್ಥನಾ ಸ್ಥಳಗಳನ್ನು ಬಳಸಬೇಡಿ: ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ!
ಈಗಾಗಲೇ 8 ತನಿಖಾ ತಂಡಗಳನ್ನು ರಚಿಸಲಾಗಿದೆ.ಎಲ್ಲ ರೀತಿಯಿಂದಲೂ ಇಡೀ ಬೆಂಗಳೂರು ಸಿಟಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಬಸ್ ನಿಂದ್ ಇಳಿದು ತಿಂಡಿ ತಿಂದು ಮತ್ತೆ ಬಸ್ ನಲ್ಲಿ ತೆರಳಿದ್ದಾನೆ. ಸಂಪೂರ್ಣ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ನಮ್ಮ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣವಾದಂತಹ ಅಧಿಕಾರ ಕೊಟ್ಟಿದ್ದೇವೆ ಎಂದರು.
Watch video: ಬಾಂಬ್ ಹೊಂದಿದ್ದ ಬ್ಯಾಗ್ನೊಂದಿಗೆ ಸಿಸಿಟಿವಿಯಲ್ಲಿ ಸೆರೆಯಾದ ಶಂಕಿತ ಉಗ್ರ !
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೂ ಇದುಕ್ಕೂ ಸಾಮ್ಯತೆ ಇರುವುದು ಕಾಣುತ್ತಿದೆ.ಎರಡಕ್ಕೂ ಒಂದೇ ರೀತಿ ಸಾಮ್ಯತೆ ಕಾಣುತ್ತಿದೆ. ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಗಾಬರಿ ಪಡುವಂಥದ್ದು ಏನೂ ಇಲ್ಲ ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಕೆ ಮಾಡಿದ್ದು, ಟೈಮರ್ ಡೆಟೋನೇಟರ್ ಎಲ್ಲಾ ವಸ್ತುಗಳು ಪತ್ತೆಯಾಗಿವೆ.
ಆದರೆ ಸೌಂಡ್ ಮಾತ್ರ ಬಹಳ ಜೋರಾಗಿ ಕೇಳಿ ಬಂದಿದೆ ಎಲ್ಲಾ ತರಹದ ಆಂಗಲ್ ನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.ಬಿಜೆಪಿ ರಾಜಕಾರಣ ಮಾಡುತ್ತಿದ್ದರೆ ಅವರ ಬೆಂಬಲ ನಮಗೆ ಬೇಕಾಗಿಲ್ಲ. ಬೆಂಗಳೂರನ್ನು ಹೆಸರನ್ನು ಹಾಳು ಮಾಡಕ್ಕೆ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ.ಅವರು ಮಾಡಿಕೊಳ್ಳಲಿ ಅವರ ಸಹಕಾರ ನಮಗೆ ಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.