ಬೆಂಗಳೂರು: ಬಾಲಕಿಯು ಗರ್ಭಿಣಿಯಾಗಿರುವ ಹಾಗೂ ಗರ್ಭಪಾತ ಮಾಡಿರುವ ಕುರಿತು ಮಾಹಿತಿ ಮುಚ್ಚಿಟ್ಟಿದ್ದ ಆರೋಪಕ್ಕೆ ಗುರಿಯಾಗಿದ್ದ ವೈದ್ಯೆಯೊಬ್ಬರ ವಿರುದ್ಧ ಸಲ್ಲಿಸಿದ್ದ ಆರೋಪಪಟ್ಟಿಯನ್ನು ರದ್ದುಪಡಿಸಿರುವ ಹೈಕೋರ್ಟ್ ತನಿಖಾಧಿಕಾರಿಗಳ ಅನುಮಾನಾಸ್ಪದ ಕಥೆ ನಂಬಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲೆಗಳಿಗೆ 856 ಕೋಟಿ ರೂ. ಬಿಡುಗಡೆ : ಸಚಿವ ಕೃಷ್ಣ ಬೈರೆಗೌಡ
ಅಂಕೋಲಾದ ಕೃಷ್ಣಾರೆಡ್ಡಿ ಮಂಕ್ಕಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರಿದ್ದ ಧಾರವಾಡ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿದಾರ ವೈದ್ಯರನ್ನು ಪ್ರಕರಣದಿಂದ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದೆ.
ಪ್ರತಾಪ್ ಸಿಂಹ ವಿರುದ್ಧ ‘ಆಧಾರರಹಿತ’ ಆರೋಪ : ‘KPCC’ ವಕ್ತಾರ ಲಕ್ಷ್ಮಣ ಮೇಲೆ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ಆಕೆಯ ತಾಯಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಕಾರವಾರದ ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ್ದ ಹೊರರೋಗಿಗಳ ರಶೀದಿ ತಂದಿದ್ದು, ಅದರಲ್ಲಿ ಆಕೆಯ ವಯಸ್ಸು 18 ಎಂಬುದಾಗಿ ಇತ್ತು. ಆದ್ದರಿಂದ ಗರ್ಭಪಾತ ಮಾಡಿದ್ದು, ದೂರು ನೀಡುವ ಪ್ರಮೇಯ ಉಂಟಾಗಿಲ್ಲ. ಆದ್ದರಿಂದ ಪ್ರಕರಣದಿಂದ ಅರ್ಜಿದಾರರನ್ನು ಮುಕ್ತಗೊಳಿಸಬೇಕು ಎಂದು ಕೋರಿದ್ದರು.
LokSabha Polls 2024: ಬಿಜೆಪಿ ಸಂಸದರೊಂದಿಗೆ ವರ್ಚುವಲ್ ಸಭೆ ನಡೆಸಿದ ‘ಜೆಪಿ ನಡ್ಡಾ’
ಸಂತ್ರಸ್ತೆಯು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ರಶೀದಿಯೊಂದಿಗೆ ಪಾಲಕರು ಹಾಗೂ ಮೊದಲನೇ ಆರೋಪಿಯೊಂದಿಗೆ ಬಂದಿದ್ದು, ಮೊದಲ ಆರೋಪಿ ಸಂತ್ರಸ್ತೆಯ ಪತಿ ಎಂಬುದಾಗಿ ವಿವರಿಸಿದ್ದರು. ಆದ ಪರಿಣಾಮ ಅರ್ಜಿದಾರರು ವಯಸ್ಸನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದ ಅರ್ಜಿದಾರರ ವಿರುದ್ಧ ಅಪರಾಧಿಕ ಹೊಣೆಯನ್ನು ಹೊರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ತನಿಖಾಧಿಕಾರಿಗಳು ಅರ್ಜಿದಾರರಿಗೆ ಸಂತ್ರಸ್ತೆಯು ಅಪ್ರಾಪ್ತ ಎಂಬುದಾಗಿ ತಿಳಿದಿದ್ದರೂ, ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಎಂಬುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಅಲ್ಲದೆ, ಈ ಸಂಬಂಧ ಅನುಮಾನದ ಕಥೆಯನ್ನು ಹೇಳಲಾಗಿದೆ. ಪೋಕ್ಸ್ ಕಾಯ್ದೆಯ ಸೆಕ್ಷನ್ 19 ಮತ್ತು 21ರ ಅಡಿಯಲ್ಲಿ ಅರ್ಜಿದಾರನ್ನು ಆರೋಪಿ ಎಂದು ಸೂಚಿಸಿರುವ ಯಾವುದೇ ಪುರಾವೆಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಆರೋಪಪಟ್ಟಿಯನ್ನು ರದ್ದುಪಡಿಸಿ ಆದೇಶಿಸಿದೆ.