ಬೆಂಗಳೂರು : ವಿಜಯಪುರದ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಧರ್ಮದ ಫೈರ್ ಬ್ರಾಂಡ್ ಎಂದೇ ಅವರನ್ನು ಕರೆಯಲಾಗುತ್ತದೆ. ಏಕೆಂದರೆ ಹಿಂದೂ ಧರ್ಮಕ್ಕೆ ಹಾಗೂ ಹಿಂದೂಗಳಿಗೆ ಎಲ್ಲೇ ಅನ್ಯಾಯವಾದರೂ ಅದರ ವಿರುದ್ಧ ಧ್ವನಿಯೆತ್ತಿ ನೇರಾ ನೇರ ಮಾತನಾಡುತ್ತಾರೆ.
ಇಸ್ರೋ ಬಾಹ್ಯಾಕಾಶ ನೌಕೆಯಲ್ಲಿ ಚೀನಾ ಧ್ವಜ :ತಪ್ಪು ಒಪ್ಪಿಕೊಂಡ ಡಿಎಂಕೆ ಸಚಿವೆ
ಅದೇ ರೀತಿಯಾಗಿ ಇದೀಗ ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ಮಾಡಿರುವ ಅವರು ಕಾಂಗ್ರೆಸ್ ಹಿಂದೂ ವಿರೋಧಿ ಏಕೆ? ಎಂದು ಹಲವು ಪ್ರಮುಖವಾದಂತಹ ಮಾಹಿತಿಗಳನ್ನು ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ಇದೀಗ ಬಸನಗೌಡ ಪಾಟೀಲ ಅವರು ವಾಗ್ದಾಳಿ ನಡೆಸಿದ್ದಾರೆ. ಅವರು ಈ ಕೆಳಗಿನ ಹಲವು ಅಂಶಗಳನ್ನು ಆಕ್ರೋಶ ಹೊರಹಾಕಿದ್ದಾರೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ 6ನೇ ಗ್ಯಾರಂಟಿ ಘೋಷಣೆ: ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್
1) ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು
2) ಆರ್ಟಿಕಲ್ 28 ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30 ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು
3) HRCE Act 1951 ಮೂಲಕ ನಮ್ಮ ದೇವಸ್ಥಾನದ ಹಣವನ್ನು ತೆಗೆದುಕೊಂಡರು
4) ಹಿಂದೂ ಕುಟುಂಬಗಳನ್ನು ವಿಭಜಿಸಲು, ಒಗ್ಗಟ್ಟನ್ನು ಮುರಿಯಲು ಡೈವೋರ್ಸ್ ಆಕ್ಟ್, ಡೌರಿ ಕಾಯ್ದೆ, ಹಿಂದೂ ಕೋಡ್ ಬಿಲ್ ಅನ್ನು ಪರಿಚಯಿಸಿದರು; ಆದರೆ, ಮುಸಲ್ಮಾನರ ಪರ್ಸನಲ್ ಲಾ ಬೋರ್ಡ್ ಅನ್ನು ಮುಟ್ಟುವ ಧೈರ್ಯಕ್ಕೆ ಹೋಗಲಿಲ್ಲ, ಬಹುಪತ್ನಿತ್ವ ಕಾನೂನುಬದ್ಧ ಆಗಿರುವುದರಿಂದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಯಿತು
5) ಸ್ಪೆಷಲ್ ಮ್ಯಾರೇಜ್ ಆಕ್ಟ್ ಅನ್ನು 1951 ರಲ್ಲಿ ಪರಿಚಯಿಸುವ ಮೂಲಕ ಮುಸಲ್ಮಾನ ಗಂಡು ಮಕ್ಕಳು, ಹಿಂದೂ ಯುವತಿಯರನ್ನು ವಿವಾಹ ಮಾಡಿಕೊಳ್ಳುವ ಅವಕಾಶ ನೀಡಿತು
6) 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಪರಿಚಯಿಸಿ ಮಾಧ್ಯಮಗಳ ಹಕ್ಕನ್ನು ಕಿತ್ತೆಸೆಯಲಾಯಿತು, ಸಾವಿರಾರು ಜನರನ್ನು ಜೈಲಿಗಟ್ಟಿದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಸಾವಿರಾರು ಜನ ಅಮಾಯಕರನ್ನು ಜೈಲಿಗೆ ದಬ್ಬಿದ್ದು ಇದೆ ಕಾಂಗ್ರೆಸ್ ಪಕ್ಷ
7) ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ಮೂಲಕ ಹಿಂದೂಗಳ 40000 ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು
8) ವಕ್ಗ್ ಆಕ್ಟ್ ಮೂಲಕ ಯಾವುದೇ ಭೂಮಿಯನ್ನು ಮುಸಲ್ಮಾನರು ತೆಗೆದುಕೊಳ್ಳುವ ಹಕ್ಕನ್ನು ಪಡೆದರು.
ಕಾಂಗ್ರೆಸ್ ಹಿಂದೂ ವಿರೋಧಿ ಏಕೆ ?
🔶ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಲಾಯಿತು
🔶ಆರ್ಟಿಕಲ್ 28 ರ ಮೂಲಕ ಹಿಂದೂಗಳ ಧಾರ್ಮಿಕ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡು, ಮುಸಲ್ಮಾನರಿಗೆ ಹಾಗೂ ಕ್ರೈಸ್ತರಿಗೆ ಆರ್ಟಿಕಲ್ 30 ರ ಮೂಲಕ ಧಾರ್ಮಿಕ ಶಿಕ್ಷಣದ ಹಕ್ಕನ್ನು ನೀಡಿತು
🔶HRCE Act 1951 ಮೂಲಕ ನಮ್ಮ ದೇವಸ್ಥಾನದ…
— Basanagouda R Patil (Yatnal) (@BasanagoudaBJP) March 1, 2024