ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲಾದ್ಯಂತ ಇಟ್ಟಿಗೆ ತಯಾರಿಸಲು ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಲೇ ಇದೇ. ಜೊತೆಗೆ ಇಲ್ಲಿ ತಯರಾದ ಇಟ್ಟಿಗೆಗಳಿಗೆ ತಮಿಳುನಾಡು,ಕೇರಳ ರಾಜ್ಯದಲ್ಲಿ ವ್ಯಾಪಕ ಬೇಡಿಕೆ ಇದ್ದು.. ಇದಕ್ಕಾಗಿ ಫಲವತ್ತತೆಯ ಮಣ್ಣು ಅನ್ಯ ರಾಜ್ಯದ ಪಾಲಾಗುತ್ತಿದೆ. ಆದರೆ ಈ ಬಗ್ಗೆ ಯಾರು ಕಾನೂನು ಕ್ರಮ ಕೈಗೊಳ್ಳದೆ ಕಂದಾಯ ಅದಿಕಾರಿಗಳು ಮೌನವಹಿಸಿದ್ದಾರೆ.
ಪಾಕಿಸ್ತಾನ ಪರ ಘೋಷಣೆ ಆರೋಪ : ಮೂವರ ವಾಯ್ಸ್ ಸ್ಯಾಂಪಲ್ ‘FSL’ ಗೆ ರವಾನಿಸಿದ ಪೊಲೀಸರು
ಕೈಗಾರಿಕಾ ಪ್ರದೇಶದಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಜಮೀನಿನಿಂದ ಮಣ್ಣು ತೆಗೆದು ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಬದನಗುಪ್ಪೆ ಕೈಗಾರಿಕಾ ಪ್ರದೇಶದಿಂದ ವಿವಿದ ಗ್ರಾಮದಲ್ಲಿ ನಡೆಸೊ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ರವಾನಿಸಲಾಗುತ್ತದೆ. ಅನ್ಯರಾಜ್ಯವಾದ ಕೇರಳ ತಮಿಳುನಾಡಿನಲ್ಲಿ ಕೆಂಪು ಮಣ್ಣು ತೆಗೆಯಲು ಅವಕಾಶವಿಲ್ಲದರಿಂದ ಇಲ್ಲಿ ತೆಗೆದು ಇಟ್ಟಿಗೆ ಸಿಧ್ದಪಡಿಸಿ ಪಕ್ಕದ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ. ಅನುಮತಿ ನೀಡದೆ ಇರೊ ಜಾಗದಲ್ಲಿ ಸರ್ಕಾರ ಕೂಡ ಯಾವ್ದೆ ಕಂದಾಯ ಪಾವತಿ ಮಾಡದೆ ಸಾಗಾಣಿಕೆ ಮಾಡುತ್ತಾ ಇದ್ದರೂ ನಾಡು ನುಡಿ ಜಲ ಎಂದು ಹೋರಾಟ ಮಾಡುವ ಕೆಲ ಸಂಘಟನೆ ಮುಖಂಡರು ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.
ಪ್ರಶ್ನಿಸಬೇಕಾದ ಕಂದಾಯ ಅಧಿಕಾರಿಗಳು ಮೌನ :
ಎಗ್ಗಿಲ್ಲದೆ ಮಣ್ಣು ಸಾಗಿಸುತ್ತಿದ್ದರೂ ಗಣಿ ಇಲಾಖೆ ಕುರುಡುತನ ಪ್ರದರ್ಶನ ತೋರುತ್ತಿದೆ. ಮತ್ತೊಂದೆಡೆ ಅನಧಿಕೃತ ಪರವಾನಿಗೆ ಪಡೆಯದೆ ಟ್ರಾಕ್ಟರ್ ಲಾರಿಯಲ್ಲಿ ಸಾಗಿಸುತ್ತಿದ್ದರೂ ಕೇಳದೆ ಇರೊ ಪ್ರಾದೇಶಿಕ ಸಾರಿಗೆ ಅದಿಕಾರಿಗಳು ಅಕ್ರಮದ ಬಗ್ಗೆ ಕೇಳಬೇಕಾದ ಪೊಲೀಸರೆ ಈ ದಂಧೆಯಲ್ಲಿ ಶಾಮೀಲಾಗಿ ಸಾಥ್ ನೀಡುತ್ತಿರೋದು ಶೋಚನೀಯ ಎಂದರೆ ತಪ್ಪಾಗಲಾರದು.
ಅನದಿಕೃತ ಮಣ್ಣು ಖನಿಜ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದರೂ ಪ್ರಾದೇಶಿಕ ಅದಿಕಾರಿಗಳು ನಮಗಲ್ಲ ಎಂದರೆ ಇದನ್ನ ತಡೆ ಹಿಡಿಯಬೇಕಾದ ಆರಕ್ಷಕರೂ ನಮ್ಮ ಕೆಲಸವಲ್ಲ ಕಂದಾಯ ಅದಿಕಾರಿಗಳ ಕೆಲಸ ಎಂದು ಸುಮ್ಮನಿದ್ದಾರೆ ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ದಾಳಿ ನಡೆಸಿದ ಗಣಿ ಇಲಾಖೆ ಮೇಲೆ ಸಾರ್ವಜನಿಕರು ಅನುಮಾನ ಪಡಬೇಕಾದ ದುಸ್ಥಿತಿ ಎದುರಾಗಿದೆ.
Caste Census : ನಾನು ಯಾವ ಜಾತಿ ಎಂದು ಯಾರೂ ಬಂದು ಮಾಹಿತಿ ಕೇಳಿಲ್ಲ: ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ
ಇಂತಹವರ ರಕ್ಷಣೆಗೆ ನಿಂತು 112 ನ ಕೆಲವು ಸಿಬ್ಬಂದಿಗಳೆ ಸಾಗಾಣಿಕೆಯ ವಾಹನದ ಮುಂದಾಳತ್ವದ ಜವಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆ ಕೇಳಿಬಂದಿದ್ದವು. *ಅಕ್ರಮವಾಗಿ ತೆಗೆದ ಮಣ್ಣನ್ನ ಇಟ್ಟಿಗೆ ಗೂಡಿಗೆ ಸಾಗಿಸಿ ಇಟ್ಟಿಗೆ ಸಿದ್ದಪಡಿಸಿ ಅನ್ಯ ರಾಜ್ಯಗಳಾದ ತಮಿಳುನಾಡು ಕೇರಳಕ್ಕೆ ಎಗ್ಗಿಲ್ಲದೆ ಇಟ್ಟಿಗೆಗಳು ರವಾನೆಯಾಗುತ್ತಿದೆ. ತಪಾಸಣೆ ಮಾಡಬೇಕಾದ ಚೆಕ್ ಪೊಸ್ಟ್ ಗಳಿಗೂ ಇಂತಿಷ್ಟು ಮಾಮೂಲಿ ನೀಡೊದರಿಂದ ನಮಗೇಕೆ ಅಂತ ಸುಮ್ಮನಾಗಿದ್ದಾರೆ. ಸರ್ಕಾರಕ್ಕೆ ಜಿಎಸ್ಟಿ ಪಾವತಿಸದೇ ಸುಲಭದಲ್ಲಿ ಉದ್ಯೋಗ ಕಂಡುಕೊಂಡಿರುವ ಮಾಲೀಕರು ಅತಿ ಹೆಚ್ಚಿನ ಲಾಭದ ಉದ್ದೇಶದಿಂದ ಮಣ್ಣು ಅನ್ಯರಾಜ್ಯದ ಪಾಲಾಗುತ್ತಿದೆ.
ಅದಿಕಾರಿಗಳಿಗಿಲ್ಲ ರಕ್ಷಣೆ:
ಕರಿಕಲ್ಲು ಬಿಳಿಕಲ್ಲು ಕೆಂಪು ಮಣ್ಣು ಹೀಗೆ ಎಗ್ಗಿಲ್ಲದೆ ಕಾನೂನುಬಾಹಿರವಾಗಿ ಸಾಗಾಟ ಮಾಡುವಾಗ ಕೃತ್ಯದಲ್ಲಿ ತೊಡಗುವವರು ದಾಳಿ ಸಂದರ್ಭದಲ್ಲಿ ಹಲ್ಲೆ ನಡೆಸುವ ತಾಜಾ ಉದಾಹರಣೆಗಳುಂಟು. ಹಿಂದೆ ಜಿಲ್ಲಾದಿಕಾರಿ ಕುಂಜಪ್ಪ ಅವರ ಮೇಲೂ ಕಲ್ಲು ತೂರಾಟವಾಗಿದ್ದವು. ಪೊಲೀಸರ ಮೇಲೆ ಹಲ್ಲೆ ಕೂಡ ಆಗಿದ್ದವು. ಪೊಲೀಸರ ನಂಬಿ ಪೂರ್ವಯೋಜಿತ ದಾಳಿ ನಡೆದರೆ ಅದಿಕಾರಿಗಳ ಮೇಲೆ ಹಲ್ಲೆ ಗಲಾಟೆ ನಡೆಯದೆ ಇರಲಾರದು.
ಗಲಾಟೆ ನಡೆದಾಗ ರಕ್ಷಣೆ ನಮ್ಮ ಕೆಲಸ ಎನ್ನುವ ಆರಕ್ಷಕರು ಮುಂದೆ ವಾಹನಗಳು ಹೋದರೆ ಆರ್ಟಿಒ,ಗಣಿ ಕಂದಾಯ ಅಧಿಕಾರಿಗಳು ಏನು ಮಾಡುತ್ತಾರೆ ಎನ್ನುವ ಇವರುಗಳು ಅಂತಹ ವಾಹನಗಳಿಗೆ ತಡೆದು ಕೈ ಯಾಕೆ ಒಡ್ಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಾರದಂತಾಗಿದೆ.ಜಿಲ್ಲಾಡಳಿತ ಕಂದಾಯ ಅದಿಕಾರಿಗಳು, ಆರ್ಟಿಓ, ಪೊಲೀಸ್ ಇಲಾಖೆ,ಗಣಿಇಲಾಖೆ ನಾಲ್ಕೈದು ಇಲಾಖೆಗಳ ಸಮನ್ವಯತೆಯಿಂದ ದಾಳಿ ನಡೆಸಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಬಹುದು ಇಲ್ಲವಾದರೆ ಕರ್ನಾಟಕದ ಖನಿಜ ಸಂಪತ್ತು ಕಂಡವ್ರ ಪಾಲಾಗದೆ ಇರಲಾರದು.