ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಖಂಡಿಸಿ ಬಾವಿಗಿಳಿದು ಧರಣಿ ನಡೆಸಿ ಜೈ ಶ್ರೀರಾಮ್ , ಮೋದಿ, ಎಂದು ಜೈಕಾರ ಕೂಗಿದ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಜೈ ಸೀತಾರಾಮ್’ ಎಂದು ಘೋಷಣೆ ಕೂಗಿ ಟಾಂಗ್ ಕೊಟ್ಟ ಪ್ರಸಂಗ ನಡೆಯಿತು.
‘ಮಲಗಲು ಭಾರತ ಉತ್ತಮವಾಗಿಲ್ಲ’ಎಂದ ಆಫ್ರಿಕನ್ ರೋಗಿಗೆ ತಿರುಗೇಟು ಕೊಟ್ಟ ಭಾರತೀಯ ನರ್ಸ್ | Watch Video
ಮಾತೆತ್ತಿದರೆ ಜೈಶ್ರೀರಾಮ್ ಎನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ? ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.
‘BJP-RSS’ ನಡುವೆ ಸಂಧಾನ ವಿಫಲ : ಲೋಕಸಭಾ ಚುನಾವಣೆಯಲ್ಲಿ ‘ಬಂಡಾಯ’ ಅಭ್ಯರ್ಥಿಯಾಗಿ ಪುತ್ತಿಲ್ ಸ್ಪರ್ಧೆ
ಗುರುವಾರ ಬಜೆಟ್ ಮೇಲಿನ ಚರ್ಚೆ ವೇಳೆ ಸಿಎಂಸಿದ್ದರಾಮಯ್ಯ ಉತ್ತರ ನೀಡಲು ಆರಂಭಿಸಿದ ವೇಳೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಅಡ್ಡಿಪಡಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ‘ಜೈ ಸೀತಾರಾಮ್’ ಎಂದರು. ಈ ಮೂಲಕ ಕೇಂದ್ರ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ರಾಜ್ಯದ ಈ 5 ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ‘ಕ್ರಿಟಿಕಲ್ ಕೇರ್’ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ