ಕಲಬುರಗಿ : ಸ್ನೇಹಿತರು ಪಾರ್ಟಿ ಕೊಡಿಸುತ್ತೇನೆ ಎಂದು ಹೇಳಿ ಜಮೀನಿಗೆ ಕರೆಸಿಕೊಂಡು ಸಂಸದ ಡಾ. ಉಮೇಶ್ ಜಾಧವ ಬೆಂಬಲಿಗನ ಭೀಕರ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಸಾಗನೂರು ಗ್ರಾಮದಲ್ಲಿ ನಡೆದಿದೆ.
BREAKING : ಕಲಬುರ್ಗಿಯಲ್ಲಿ ‘ಬಿಜೆಪಿ’ ಮುಖಂಡನ ಭೀಕರ ಹತ್ಯೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಗಿರೀಶ್ ಚಕ್ರ ಎಂದು ಹೇಳಲಾಗುತ್ತಿದ್ದು, ಸಂಸದ ಡಾ. ಉಮೇಶ್ ಜಾದವ್ ಬೆಂಬಲಿಗ ಕೂಡ ಎಂದು ಹೇಳಲಾಗುತ್ತಿದ್ದು, ಗಿರೀಶ್ ಬಿಜೆಪಿ ಮುಖಂಡರಾಗಿದ್ದು, ಸಾಗನೂರು ಗ್ರಾಮದ ಜಮೀನಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ.ಕಳೆದ ನಾಲ್ಕು ದಿನಗಳ ಹಿಂದೆ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಗಿರೀಶ್ ಆಯ್ಕೆಯಾಗಿದ್ದರು.
ಗಾಲಿ ಕುರ್ಚಿ ನೀಡದೆ ಪ್ರಯಾಣಿಕನ ಸಾವಿಗೆ ಕಾರಣವಾದ ‘ಏರ್ ಇಂಡಿಯಾ’ಗೆ 30 ಲಕ್ಷ ರೂ. ದಂಡ ವಿಧಿಸಿದ DGCA
ಹೀಗಾಗಿ ಜಾದವ್ ಬೆಂಬಲಿಗ ಗಿರೀಶ್ ಗೆ ಸ್ನೇಹಿತರಿಂದ ಕರೆ ಮಾಡಿದ್ದು ಪಾರ್ಟಿ ಕೊಡಿಸುವುದಾಗಿ ಕರೆಸಿ ಮಾರಕಾಸ್ಟ್ರಗಳಿಂದ ಹತ್ಯೆ ಮಾಡಲಾಗಿದೆ.ಕಣ್ಣಿಗೆ ಕಾರದಪುಡಿ ಎರಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.ಇದೀಗ ಆರೋಪಿಗಳಿಗಾಗಿ ಗಣಗಾಪುರ ಪೊಲೀಸರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ.
75 ಸಾವಿರ ಕೋಟಿ ರೂ. ರೂಫ್ಟಾಪ್ ಸೌರ ಯೋಜನೆ, ಒಂದು ಕೋಟಿ ಕುಟುಂಬಗಳು ಸಬ್ಸಿಡಿ ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ