ಕಲಬುರಗಿ : ಆಳಂದ ತಾಲೂಕಿನ ಬಿಜೆಪಿ ಮುಖಂಡ ಹಾಗೂ ಸಹಕಾರಿ ಧುರೀಣರಾಗಿದ್ದ ಮಹಾಂತಪ್ಪ ಎಸ್. ಆಲೂರೆ (47) ಅವರನ್ನು ದುಷ್ಕರ್ಮಿಗಳು ಗುರುವಾರ ಬೆಳಗಿನ ಜಾವ ಮಾದನಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸ್ವಗ್ರಾಮ ಸರಸಂಬಾದಲ್ಲಿಯೇ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಗ್ಗೋಲೆ ಮಾಡಿದ್ದಾರೆ.
ಗಾಲಿ ಕುರ್ಚಿ ನೀಡದೆ ಪ್ರಯಾಣಿಕನ ಸಾವಿಗೆ ಕಾರಣವಾದ ‘ಏರ್ ಇಂಡಿಯಾ’ಗೆ 30 ಲಕ್ಷ ರೂ. ದಂಡ ವಿಧಿಸಿದ DGCA
ಕೊಲೆಯಾದ ಮಹಾಂತಪ್ಪ ಹೊಲಕ್ಕೆ ಹೋದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಠಾತ್ ದಾಳಿ ನಡೆಸಿ, ಕೊಲೆಮಾಡಿ ಪರಾರಿಯಾಗಿದ್ದಾರೆ. ರಾಡ್‌ನಿಂದ ದುಷ್ಕರ್ಮಿಗಳು ನಡೆಸಿದ ದಾಳಿಗೆ ತೀವ್ರಗಾಯಗೊಂಡಿದ್ದ ಆಲೂರೆ ಅವರನ್ನು ಆಳಂದನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಸೋಲ್ಲಾಪೂರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.
75 ಸಾವಿರ ಕೋಟಿ ರೂ. ರೂಫ್‌ಟಾಪ್ ಸೌರ ಯೋಜನೆ, ಒಂದು ಕೋಟಿ ಕುಟುಂಬಗಳು ಸಬ್ಸಿಡಿ ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದು, ಘಟಕನೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆದಿದೆ. ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಸಹಕಾರಿ ಧುರೀಣ ಆಲೂರೆ ಅವರು 4 ಬಾರಿ ಸರಸಂಬಾ ಗ್ರಾ.ಪಂ.ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅವರು ಮುಂಬರುವ ಜಿಪಂ ಚುನಾವಣೆಯ ಸ್ಪರ್ಧಾ ಆಕಾಂಕ್ಷಿಯಾಗಿದ್ದು, ಸಿದ್ಧತೆ ಕೂಡಾ ನಡೆಸಿದ್ದರು. ಅವರ ಕೊಲೆಗೆ ರಾಜಕೀಯ ದ್ವೇಷವೇನಾರದೂ ಕಾರಣವೇ ಅಥವಾ ವೈಯಕ್ತಿಕ ವೈಷಮ್ಯವೇ ಎಂಬ ಶಂಕೆ ಜನರನ್ನು ಕಾಡುತ್ತಿದೆ.
ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ : ‘ಫಾಸ್ಪೆಟಿಕ್’ ರಸಗೊಬ್ಬರ ಸಬ್ಸಿಡಿ 8 ರು. ಹೆಚ್ಚಳ