ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೊರೊನಾ ಕೇಸ್ ಜಾಸ್ತಿಯಾಗ್ತಾ ಇದೆ ನಿಜ. ಆದರೆ ಇದರ ನಡುವೆ ಹವಾಮಾನದ ಬದಲಾವಣೆಯಿಂಗಾಗಿ ಸಾಮಾನ್ಯವಾಗಿ ಎಲ್ಲಲ್ಲಿ ಕೆಲವರಿಗೆ ಶೀತ ಕೆಮ್ಮು ಹಾಗು ಲೈಟ್ ಆಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗೆ ಆದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ. ತಮಗೆ ಕೊರೊನಾ ಒಕ್ಕರಿಸಿತು ಎಂದು ಭಯ ಪಡುತ್ತಿದ್ದಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಇದು ಸಾಮಾನ್ಯವಾಗಿ ಬಂದು ಹೋಗುವ ವೈರಲ್ ಫೀವರ್ ಎದು ಹೇಳುತ್ತಿದ್ದಾರೆ. ಹೀಗೆ ವೈರಲ್ ಫೀವರ್ ಬಂದರೆ ಈ ಕೆಳಗಿನ ಮನೆಮದ್ದನನ್ನು ಟ್ರೈ ಮಾಡಿ. ಇದರಿಂದ ನಿಮ್ಮ ಕಾಯಿಲೆ ವಾಸಿಯಾಗದೇ ಇದ್ದಾಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ.
ಶುಂಠಿ: ಶುಂಠಿ ಚಹಾ ಸೇವಿಸಿ. ಒಂದು ಲೋಟ ನೀರು ಕಾಯಿಸಿ ಅದಕ್ಕೆ ಒಂದು ಚೂರಷ್ಟು ಶುಂಠಿ ಹಾಕಿ ಮತ್ತಷ್ಟು ಕುದಿಸಿ. ಇದನ್ನು ಸೋಸಿಕೊಂಡು ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ಮತ್ತು ಶೀತ ಬೇಗ ನಿವಾರಣೆಯಾಗುತ್ತದೆ.
ಜೇನುತುಪ್ಪ: ಕೆಮ್ಮು ಹೆಚ್ಚಾಗಿದ್ದರೆ ನೀರಿಗೆ ತಿಳಸಿ ಪುದಿನಾ ಎಲೆ ಹಾಕಿ, ಬೇಕಿದ್ದರೆ ಇನ್ನು ಕೆಲ ಔಷಧೀಯ ಗಿಡಮೂಲಿಕೆಗಳನ್ನು ಹಾಕಿ ಉದಾಹರಣೆಗೆ ಅಮೃತ ಎಲೆ. ಹೀಗೆ ಇವೆಲ್ಲವನು ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಜೇನುತುಪ್ಪ ಹಾಕಿ ಕುಡಿದರೆ ಎಲ್ಲ ರೀತಿಯ ಆರೋಗ್ಯ ಸಮಸ್ಯ ಕಡಿಮೆಯಾಗುತ್ತದೆ. ಹಾಗು ಇದರಿಂದ ರೋಗ ನಿರೋಧಕ ಶಕ್ತಿ ಕೂಡ ದೇಹಕ್ಕೆ ಒದಗಿಸುತ್ತದೆ.
ಗೋಲ್ಡನ್ ಮಿಲ್ಕ್: ಗೋಲ್ಡನ್ ಮೀಲ್ಕ್ ಸೇವನೆ ಕೊರೊನಾ ಬಂದಾಗಿನಿಂದ ಹೆಚ್ಚು ಚಾಲ್ತಿಯಲ್ಲಿದೆ. ರಾತ್ರಿ ಮಲಗುವ ಮುನ್ನ ಅರ್ಧ ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿನ ಹಾಕಿ ಸೇವಿಸಿದರೆ ಆನಾರೋಗ್ಯದಿಂದ ಬೇಗನೆ ಗುಣಮುಖರಾಗಬಹುದು. ಇನ್ನ ಈ ಅರಿಶಿನ ಮಿಶ್ರಿತ ಹಾಲು ಸೇವನೆ ನಾವು ನಿತ್ಯವೂ ಸೇವಿಸಿವ ರೂಢಿಯಲ್ಲಿಟ್ಟುಕೊಂಡರೆ ಕೊರೊನಾ ಸೇರಿದಂತೆ ಇನ್ನುಳಿದ ವೈರಲ್ ಫೀವರ್‌ಗಳನ್ನು ಆಗದಂತೆ ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ.
ಕೆಮ್ಮು ನೆಗಡಿ ಶೀತಕ್ಕೆ ಮಸಾಲಾ ಚಹಾ ಭಾರೀ ಪರಿಣಾಮ ಬೀರುತ್ತದೆ. ನೀವು ಹಾಲಿನ ಚಹಾ ತಯಾರಿಸುವಾಗ ಇದಕ್ಕೆ ಸ್ವಲ್ಪ ಶುಂಠಿ, ಕರಿಮೆಣಸು, ತುಳಸಿ ಎಲೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯಿರಿ. ಸಕ್ಕರೆ ಬದಲಾಗಿ ಸಾವಯವ ಬೆಲ್ಲ ಬಳಸಿದರೆ ಉತ್ತಮ. ಈ ಎಲ್ಲಾ ಅಂಶಗಳು ನಿಮ್ಮ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಒಂದು ಸಾಂಪ್ರದಾಯಕ ಪದ್ಧತಿಯಾಗಿದೆ. ಶೀತ ಕೆಮ್ಮು ಜ್ವರ ಬರುವ ಮಿನ್ಸೂಚನೆ ಎಂದರೆ ಅದು ಗಂಟಲು ನೋವು ಅಥವಾ ಗಂಟಲು ಕೆರೆತ ಹೀಗೆ ಆದರೆ ನೀವು ಕೂಡಲೇ ಬಿಸಿ ನೀರಿಗೆ ಉಪ್ಪು ಹಾಕಿ ಮುಕ್ಕಳಿಸಿ. ಹೆಚ್ಚು ಬೀಸಿ ನೀರು ಬೇಡ. ಉಪ್ಪು ನೀರಿಗೆ ಅರಿಶಿನ ಹಾಕಿದರೂ ಇನ್ನೂ ಒಳ್ಳೆಯದು ಹೀಗೆ ದಿನಕ್ಕೆ ಕನಿಷ್ಡ ಪಕ್ಷ ನಾಲ್ಕೈದು ಬಾರಿ ಮಾಡಿದರೂ ಪರವಾಗಿಲ್ಲ. ಜ್ವರದ ಪ್ರಭಾವ ಕಡಿಮೆ ಮಾಡಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.