ಕೆಎನ್ಎನ್ಡಿಜಿಟಲ್ಡೆಸ್ಕ್: ದಕ್ಷಣ ಭಾರತದಲ್ಲಿ ಎಳನೀರಿನ ಉತ್ಪಾದನೆ ಹಾಗು ಎಳನೀರಿನ ಸೇವನೆ ಅಧಿಕ. ಇದು ನೈರ್ಗಿಕ ಶಕ್ತಿದಾಯಕವಾದ ಪಾನೀಯ. ಅಂದರೆ ನ್ಯಾಚ್ಯುರಲ್ ಎನರ್ಜಿ ಡ್ರಿಂಕ್. ಇದರ ಸೇವನೆಯಿಂದಾಗಿ ಆರೋಗ್ಯಕ್ಕೆ ಅನೇಕ ಲಾಭಗಳು ಇವೆ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು ಇದರ ಸೇವನೆಯ ತಕ್ಷಣವೇ ದೇಹಕ್ಕೆ ನವಚೈತನ್ಯ ಉಂಟಾಗುತ್ತದೆ. ದೇಹಕ್ಕೆ ನಿಶಕ್ತಿ ಉಂಟಾದರೆ ಇದರ ಸೇವನೆಯಿಂದ ದೇಹ ಕೂಡಲೇ ಶಕ್ತಿಯುತವಾಗಿ ಚಟುವಟಿಕೆಯಿಂದಿರಬಹುದು. ಬಿಸಿಲಿಗೆ ಬಳಲಿದವರಿಗ ಎಳನೀರು ಜೀವಾಮೃತ ಎಂದರೆ ತಪ್ಪಿಲ್ಲ.
ಎಳನೀರು ಸೇವನೆ ದೇಹದ ಒಳಗಲ್ಲ. ದೇಹದ ಹೊರಭಾಗಗಳಾದ ಚರ್ಮ, ಕೂದಲಿಗೂ ಉತ್ತಮ ಆರೈಕೆ ನೀಡುತ್ತದೆ. ಹಾಗು ಇದರ ಸೇವನೆಯಿಂದ ಕೆಲಸದ ಹಾಗು ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ.
ಗರ್ಭಿಣಿಯರು ನಿಯಮಿತವಾಗಿ ಎಳನೀರು ಸೇವಿಸಿದರೆ ತಾಯಿ ಮಗು ಇಬ್ಬರ ಆರೋಗ್ಯ ವೃದ್ಧಿಯಾಗುತ್ತದೆ. ಇದರಲ್ಲಿ ಒಮೆಗಾ 3 ಅಂಶವಿದ್ದು, ಇದು ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಹಾಗಾಗಿ ವೈದ್ಯರು ಗರ್ಭಿಣಿಯರಿಗೆ ನಿಯಮಿತವಾಗಿ ಎಳನೀರು ಸೇವಿಸಲು ಹೇಳುತ್ತಾರೆ.
ಎಳನೀರು ಸೇವನೆ ಉತ್ತಮ ಜೀರ್ಣಕ್ರಿಯೆಗೆ ತುಂಬಾ ಪೂರಕವಾಗಿದೆ. ಇದರಲ್ಲಿ ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಪೆರಾಕ್ಟಿಡೇತ್ ಮುಂತಾದ ಅಂಶಗಳು ತಿಂದ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಎಳನೀರು ಮಲಬದ್ಧತೆಯನ್ನು ತಡೆಗಟ್ಟುತ್ತದೆ.
ಮೂತ್ರಪಿಂಡ ಸಮಸ್ಯೆ ಇದ್ದರೆ ಅಂದರೆ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರು ಸೇವನೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಏಳನೀರಿನಲ್ಲಿರುವ ಪೊಟ್ಯಾಶಿಯಂ ಲವಣಗಳನ್ನು ಕರಗಿಸುವ ಶಕ್ತಿ ಹೊಂದಿರುತ್ತವೆ. ಹಾಗಾಗಿ ಇದು ಮೂತ್ರಪಿಂಡಗಳಲ್ಲಿನ ಕಲ್ಲುಗಳನ್ನು ಕರಗಿಸಿ. ಆರೋಗ್ಯವನ್ನು ಸುಧಾರಿಸುತ್ತದೆ.
ಎಳನೀರು ಸೇವನೆ ತ್ವಚೆಗೆ ತುಂಬಾ ಪ್ರಯೋಜನಕಾರಿ. ಎಳನೀರು ಸೇವಿಸದರೆ ತ್ವಚೆಗೆ ಸಂಬಂಧಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮೊಡವೆಗಳ ನಿವಾರಣೆ, ಸುಕ್ಕು ನಿವಾರಣೆ, ಒಣ ಚರ್ಮ ಹೋಗಲಾಡಿಸಿ ಚರ್ಮಕ್ಕೆ ಕಾಂತಿ ಹೆಚ್ಚಿಸುತ್ತದೆ. ಹಾಗು ಫೇಸ್ ಪ್ಯಾಕ್ ಮಾಡಿಕೊಳ್ಳುವಾಗ ಕೆಲವೊಮ್ಮೆ ಎಳನೀರನ್ನು ಸೇರಿಸಿಕೊಂಡರೆ ಉತ್ತಮ ಪರಿಣಾಮ ಕಂಡುಕೊಳ್ಳಬಹುದು ಎಂದು ಬ್ಯೂಟಿಷಿಯನ್ಸ್ ಹೇಳುತ್ತಾರೆ. ಸೊಂಪಾದ ಕೂದಲಿನ ಬೆಳವಣಿಗೆಗೂ ಎಳನೀರು ಸೇವನೆ ಉತ್ತಮ.