ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪವನ್ನು ವಿರೋಧಿಸಿ ಇಂದು ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ವಿಧಾನಸೌಧದಿಂದ ರಾಜಭವನಕ್ಕೆ ಕಾಂಗ್ರೆಸ್ ವಿರುದ್ಧ ದಿಕ್ಕಾರ ಹೋಗುತ್ತಾ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿತು.
BREAKING: 6 ಬಂಡಾಯ ‘ಕಾಂಗ್ರೆಸ್ ಶಾಸಕ’ರನ್ನು ಅನರ್ಹಗೊಳಿಸಿದ ‘ಹಿಮಾಚಲ ಸ್ಪೀಕರ್’ | Himachal Political crisis
ಕಳೆದ ಎರಡು ದಿನಗಳ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ದಾಖಲಿಸಿದ್ದ ಸಂದರ್ಭದಲ್ಲಿ ಸಂಭ್ರಮಾಚರಣೆಯ ವೇಳೆ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ ಅಪರ ಘೋಷಣೆ ಕೂಗಿದರು. ಈ ಒಂದು ಘಟನೆ ರಾಜ್ಯಾದ್ಯಂತ ಭಾರಿ ತದ್ದು ಮಾಡುತ್ತಿದ್ದು ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿವೆ.
ಇದೀಗ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ವಿಧಾನಸೌಧದ ಪಶ್ಚಿಮ ಬಾಗಿಲಿನ ಬಳಿ ಧರಣಿ ಕುಳಿತು ಇದೀಗ ರಾಜ ಭವನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ರಾಜಭವನಕ್ಕೆ ತೆರಳಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಘೋಷಣೆ ಕೂಗಿದ ಆರೋಪಿಯನ್ನು ಹೊಂದಿಸಿ ರಾಜ್ಯ ಸರ್ಕಾರವನ್ನು ವಜಾ ಗೊಳಿಸಿ ಎಂದು ಮನವಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.
BREAKING: ಮಾಜಿ IAS ಅಧಿಕಾರಿ, ‘ನಟ ಕೆ.ಶಿವರಾಮ್’ ಇನ್ನಿಲ್ಲ | Actor K Sivaram No More
ಈ ಒಂದು ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಾಡಿ ಸಚಿವ ಅರಗ ಜ್ಞಾನೇಂದ್ರ ಶಾಸಕರಾದ ಮುನಿರತ್ನ, ಪ್ರಭು ಚೌಹಾಣ್, ಬಸವರಾಜ್ ಮತ್ತಿ ಮಡು ಸೇರಿದಂತೆ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಒಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ದಾರಿ ಯುದ್ಧಕ್ಕೂ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಜಭವನಕ್ಕೆ ಪಾದಯಾತ್ರೆ ನಡೆಸಿ ದೂರು ಸಲ್ಲಿಸಿವೆ.