ಬೆಳಗಾವಿ : ಇತ್ತೀಚಿಗೆ ಬೆಳಗಾವಿ ತಾಲೂಕಿನ ವಂಟ ಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಇನ್ನೂ ಹಸಿಯಾಗಿರುವಾಗಲೇ, ಇದೀಗ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಒತ್ತುವರಿ ಪ್ರಶ್ನಿಸಿದಕ್ಕೆ ಮಹಿಳೆಯನ್ನ ವಿವಸ್ತ್ರಗೊಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ.
ಐನಾಪುರ ಗ್ರಾಮದಲ್ಲಿ ಬಡ ಕುಟುಂಬ ಒಂದು ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಬಡ ಕುಟುಂಬದ ಮಹಿಳೆಯ ಸೀರೆ ಕಳಚಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ಅರೆಬೆತ್ತಲೆ ಮಾಡಿದಲ್ಲದೆ ಆಕೆಯ ಪುತ್ರನ ಮೇಲು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಐನಾಪುರ ಗ್ರಾಮದವರಾದ ಸುಭಾಷ್ ದಾನೋಳ್ಳಿ, ಸುರೇಶ್, ಮಾಯಪ್ಪ ಹಲ್ಯಾಳನಿಂದ ಈ ಕೃತ್ಯ ನಡೆದಿದೆ. ಹೊತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಬಡ ಮಹಿಳೆಯ ಸೀರೆಯನ್ನು ಕಳಚಿ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ ಆಕೆಯ ಪುತ್ರನ ಮೇಲು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಇದೀಗ ಆರೋಪ ಕೇಳಿ ಬಂದಿದೆ.
ಇತ್ತೀಚಿಗೆ ವಂಟಮುರಿ ಗ್ರಾಮದಲ್ಲಿ ಇಂತಹದೇ ಪ್ರಕರಣ ನಡೆದಿದ್ದು, ಆರೋಪಿಗಳ ಮನೆಯ ಯುವತಿಯನ್ನು ಹಲ್ಲಿಗೆ ಒಳಗಾದ ಮಹಿಳೆಯ ಮಗ ಪ್ರೀತಿಸಿ ಓಡಿಸಿಕೊಂಡು ಹೋಗಿದ್ದಾನೆಂದು ಆರೋಪಿಸಿ ಆಕೆಯನ್ನು ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದು ಇಡೀ ದೇಶಾದ್ಯಂತ ತಲೆತಗ್ಗಿಸುವಂತೆ ಮಾಡಿತು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.