ಬೆಂಗಳೂರು : ಸರ್ಕಾರಿ ಒತ್ತುವರಿ ತೆರವಿನ ವೇಳೆ ಜೆಸಿಬಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಉತ್ತರದ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳು ಸರ್ಕಾರಿ ಬಂಡಿದಾರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.
ಶಿವಕೋಟೆ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಒತ್ತವರಿ ಮಾಡಿಕೊಂಡಿದ್ದರಿಂದ, ಒತ್ತುವರಿ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದರು. ಆರ್ ಐ ರವಿಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿತ್ತು.ಈ ವೇಳೆ ಒತ್ತುವರಿದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು.ಅಲ್ಲದೆ ಕೋಪಗೊಂಡ ಒತ್ತುವರಿದಾರರು ಜೆಸಿಬಿಗೆ ಬೆಂಕಿ ಹಚ್ಚಿದ್ದಾರೆ.
BREAKING: ರಾಜ್ಯದ ‘ವಿದ್ಯುತ್ ಬಳಕೆದಾರ’ರಿಗೆ ಗುಡ್ ನ್ಯೂಸ್: ‘ದರ ಇಳಿಕೆ’ ಮಾಡಿ ಸರ್ಕಾರ ಆದೇಶ | Electricity Price
ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯ ನಡೆಸುತ್ತಿದ್ದರು. ಸದ್ಯ ಒತ್ತುವರಿದಾರರನ್ನ ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳಾದ ಬಚ್ಚೇಗೌಡ ಮತ್ತು ಚೇತನ್ ವಿರುದ್ಧ ದೂರು ದಾಖಲಾಗಿದೆ.