ಉಡುಪಿ : ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಧಿಕಾರ ಶಾಶ್ವತವಲ್ಲ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಪ್ರಕರಣವನ್ನು ಎನ್ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಗ್ರಹಿಸಿದ್ದಾರೆ.
‘ಕೋವಿಡ್’ ನಂತರ ಭಾರತೀಯರಿಗೆ ಶ್ವಾಸಕೋಶದ ಹಾನಿಯ ಅಪಾಯ : ಶಾಕಿಂಗ್ ವರದಿ
ಉಡುಪಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ಮಾನಸಿಕತೆ ಇದ್ದವರನ್ನು ಪೊಲೀಸರು ವಿಧಾನಸೌಧ ಒಳಗೆ ಹೇಗೆ ಬಿಟ್ಟರು?. ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಗರ್ಭಿಣಿಯರು ಯಾವ ಜ್ಯೂಸ್ ಕುಡಿಯಬೇಕು ಮತ್ತು ಅದರಿಂದ ಏನು ಲಾಭ? ಇಲ್ಲಿದೆ ಫುಲ್ ಡಿಟೇಲ್ಸ್
ಸಯ್ಯದ್ ನಾಸೀರ್ ಹುಸೇನ್ ಬೆಂಬಲಿಗರ ಸಂಪರ್ಕ ಯಾರ ಜೊತೆ ಇದೆ? ಅಲ್ಲಿ ಬಂದಿರುವ ಯುವಕರ ಸಂಪರ್ಕ ಯಾರ ಜೊತೆ ಇದೆ? ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
BREAKING : ಹಾವೇರಿಯಲ್ಲಿ ‘ಲಾರಿ-ಬೈಕ್’ ನಡುವೆ ಭೀಕರ ಅಪಘಾತ : 6 ವರ್ಷದ ಬಾಲಕ ಸೇರಿ ಮೂವರ ಸಾವು