ಬೆಂಗಳೂರು : ವಿಧಾನಸೌಧದಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು ರಾಜ್ಯಸಭಾ ಚುನಾವಣೆಗೆ ಈವರೆಗೂ 112 ಮತಗಳು ಚಲಾವಣೆಗೊಂಡಿವೆ. ಇದೆ ವೇಳೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಗೆ ಶಾಕ್ ನೀಡಿದ್ದು ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಮತದಾನ ನಂತರ ಮಾತನಾಡಿದ ಎಸ್ ಟಿ ಸೋಮಶೇಖರ್, ನನಗೆ ಭರವಸೆ ನೀಡಿದವರೆಗೆ ನಾನು ಮತ ಹಾಕಿದ್ದೇನೆ.ನಾನು ಆತ್ಮಸಾಕ್ಷಿಯ ಮತ ಚಲಾವಣೆ ಮಾಡಿದ್ದೇನೆ. ಅನುದಾನದ ಭರವಸೆ ನೀಡಿದವರಿಗೆ ನಾನು ಮತ ಹಾಕಿದ್ದೇನೆ ಎಂದು ಅವರು ತಿಳಿಸಿದರು.
ಮಾಜಿ ಸಿಎಂ HD ಕುಮಾರಸ್ವಾಮಿ, ಎಸ್.ಟಿ ಸೋಮಶೇಖರ್ ನಡುವೆ ವಾಕ್ಸಮರ : ಉಭಯ ನಾಯಕರು ಹೇಳಿದ್ದೇನು?
ಮತದಾನಕ್ಕೂ ಮುನ್ನ ಅನುದಾನದ ಭರವಸೆ ನೀಡುವವರಿಗೆ ಬೆಂಬಲ ನೀಡುತ್ತೇನೆ. ಅನುದಾನ ಕೊಟ್ಟವರಿಗೆ ಮೊದಲ ಪ್ರಾಶಸ್ತದ ಮತ ಹಾಕುತ್ತೇನೆ. ಎಂದು ವಿಧಾನಸೌಧದಲ್ಲಿ ಎಸ್ ಟಿ ಸೋಮಶೇಖರ್ ತಿಳಿಸಿದ್ದರು. ಏನಾದರೂ ಆಗಲಿ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ನಾನು ಯಾವ ಲೀಡರ್ಗಳನ್ನು ಭೇಟಿಯಾಗಲ್ಲ ಎಂದು ಹೇಳಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.
ಕುಮಾರಸ್ವಾಮಿಗೆ ‘ಆತ್ಮ’ ಅನ್ನೋದೇ ಇಲ್ಲ ಇನ್ನೂ ‘ಆತ್ಮಸಾಕ್ಷಿ’ ಎಲ್ಲಿಂದ ಬರ್ಬೇಕು ? : ಸಿಎಂ ಸಿದ್ದರಾಮಯ್ಯ ವ್ಯಂಗ್ಯ