ಬೆಂಗಳೂರು : ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ ನಡುವೆ ವಾಕ್ಸಮರ ನಡೆದಿದೆ.
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದು, ಮೂರು ವರ್ಷ ಮಂತ್ರಿಯಾಗಿ ಅವರ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ. ಬಿಜೆಪಿಗೆ ಹೋಗಬೇಕಾದರೆ ಕಾರಣ ಕೊಟ್ಟಿದ್ದರು.ಬಿಜೆಪಿ ಸರ್ಕಾರದಲ್ಲಿ ಮೂರು ವರ್ಷ ಮಂತ್ರಿಯಾಗಿ ಎಲ್ಲವನ್ನು ಪಡೆದುಕೊಂಡಿದ್ದಾರೆ ಅಭಿವೃದ್ಧಿಯ ಆಗುತ್ತಿಲ್ಲ ಅಂತ ಬಿಜೆಪಿಗೆ ಹೋಗಿದ್ದರು.
‘ಮನೆಯಲ್ಲಿ ಯಾರನ್ನಾದರೂ ಅನುಸರಿಸಿ’:ಬೆಂಗಳೂರಿನಲ್ಲಿ ಗಮನ ಸೆಳೆದ ಚಮತ್ಕಾರಿ ‘ಟ್ರಾಫಿಕ್ ಸೈನ್‌ಬೋರ್ಡ್’
ಆದರೆ ಕ್ಷೇತ್ರ ಬಿಟ್ಟು ಅವರ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ನೀಡಿದ್ದಾರೆ
ಆದರೆ ಇದುವರೆಗೂ ಅವರ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಆದರೆ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
BREAKING: ಸಮಾಜವಾದಿ ಪಕ್ಷದ ‘ಸಂಸದ ಶಫಿಕುರ್ ರೆಹಮಾನ್ ಬಾರ್ಕ್’ ನಿಧನ | MP Shafiqur Rahman Barq No More
ಕುಮಾರಸ್ವಾಮಿ ಮಾತಿಗೆ ಎಸ್‌ಟಿ ಸೋಮಶೇಖರ್ ಆಕ್ರೋಶ ಅವರ ಹಾಕಿದ್ದು, ಎಚ್ ಡಿ ಕುಮಾರಸ್ವಾಮಿ ಕೂಡ ಅವಕಾಶವಾದಿ ಅಲ್ವಾ? ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವಕಾಶವಾದಿ ಆಗಿರಲಿಲ್ಲವ? ಜನಾದೇಶ ಇಲ್ಲ ಅಂತ ಸಿಎಂ ಸ್ಥಾನ ಬಿಡೋಕಾಬಿಡಬಹುದಿತ್ತು ಬಿಟ್ರ? ಎಂದು ಎಸ್.ಟಿ ಸೋಮಶೇಖರ್ ಆಕ್ರೋಶ ಹೊರ ಹಾಕಿದ್ದಾರೆ.