ಬೆಂಗಳೂರು : ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸೌಧದಲ್ಲಿ ಮತದಾನ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಈಗಾಗಲೇ ಮೂರು ಪಕ್ಷದ ಎಲ್ಲಾ ನಾಯಕರು ಮತದಾನ ಚಲಾಯಿಸಿದ್ದಾರೆ ಇದುವರೆಗೂ 102 ಮತ ಹಾಕಲಾಗಿದೆ. ಮತದಾನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ನವರಿಗೆ ಆತ್ಮೀಯ ಇಲ್ಲ ಇನ್ನು ಆತ್ಮಸಾಕ್ಷಿಯಲ್ಲಿ ಬರಬೇಕು ಎಂದು ವ್ಯಂಗ್ಯವಾಡಿದರು.
‘ಮನೆಯಲ್ಲಿ ಯಾರನ್ನಾದರೂ ಅನುಸರಿಸಿ’:ಬೆಂಗಳೂರಿನಲ್ಲಿ ಗಮನ ಸೆಳೆದ ಚಮತ್ಕಾರಿ ‘ಟ್ರಾಫಿಕ್ ಸೈನ್‌ಬೋರ್ಡ್’
ವಿಧಾನಸೌಧದಲ್ಲಿ ಸುಧೀಕಾರದೊಂದಿಗೆ ಮಾತನಾಡಿದ ಅವರು, ನಮ್ಮ ಮೂರು ಜನ ಅಭ್ಯರ್ಥಿಗಳು ಅಜಯ್ ಮಕೆನ್, ಜೆಸಿ ಚಂದ್ರಶೇಖರ್, ಸೈಯದ ನಾಸಿರ್ ಹಸುನ್ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು. ಜೆಡಿಎಸ್ ಅವರಿಗೆ ಆತ್ಮನೇ ಇಲ್ಲ ಇನ್ನೂ ಆತ್ಮಸಾಕ್ಷಿ ಎಲ್ಲಿದೆ? ಜೆಡಿಎಸ್ ಎಂದರೆ ಜೆಡಿಸೆಕ್ಯುಲರ್ ಅಂದ್ರೆ ಬಿಜೆಪಿಯೊಂದಿಗೆ ಸೇರಿಕೊಂಡಿದ್ದಕ್ಕೆ ಜೆಡಿ ಸೆಕ್ಯುಲರ್ ಎಂದಾಗಿದೆ ಎಂದು ಕುಟುಕಿದರು.
‘ಆಮಿಷ’ ಒಡ್ಡುವುದು ‘ಬೆದರಿಕೆ’ ಹಾಕುವುದು ‘ಕಾಂಗ್ರೆಸ್ ಸಂಸ್ಕೃತಿ’ : ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಿಡಿ
ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವವರು ಬೇರೆ ಪಕ್ಷದ ಶಾಸಕರಿಂದ ಮತಗಳು ಬರಬಹುದು. ನಾವು ಯಾವತ್ತೂ ಕೂಡ ಬೇರೆ ಶಾಸಕರಿಗೆ ಆಮಿಷ ಒಡ್ಡಿಲ್ಲ. ನಮಗೆ ಒಳ್ಳೆಯ ಮತದಾನಗಳು ಇರುವಾಗ ಆಮಿಷ ಹೊಡುವ ಪ್ರಮೇಯವೇ ಬರುವುದಿಲ್ಲ. ನಮಗೆ 136 ಹಾಗೂ ಸ್ವತಂತ್ರವಾಗಿ ಗೆದ್ದಿರುವಂತಹ ಶಾಸಕರು ಕೂಡ ನಮಗೆ ಆಮೀಷ ಒಡ್ದುವ ಪ್ರಮೇಯವೇ ಇರುವುದಿಲ್ಲ. ಆಸೆ ಆಮಿಷ ಬೆದರಿಕೆ ವಡುವುದು ಬಿಜೆಪಿ ಜೆಡಿಎಸ್ ನವರು ಎಂದು ತಿರುಗೇಟು ನೀಡಿದರು.
BREAKING: ಸಮಾಜವಾದಿ ಪಕ್ಷದ ‘ಸಂಸದ ಶಫಿಕುರ್ ರೆಹಮಾನ್ ಬಾರ್ಕ್’ ನಿಧನ | MP Shafiqur Rahman Barq No More