ಬೆಂಗಳೂರು : ಇಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖೆ 106 ರಲ್ಲಿ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಶಾಸಕರಿಂದ ಮತದಾನ ನಡೆಯುತ್ತಿದೆ. ತಂಡಗಳಾಗಿ ಬಂದು ಶಾಸಕರು ಮತದಾನ ಮಾಡುತ್ತಿದ್ದಾರೆ. ಇದುವರೆಗೂ 102 ಮತಗಳು ಚಲಾವಣೆಯಾಗಿವೆ ಎಂದು ತಿಳಿದುಬಂದಿದೆ.
ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ : ಸಿಎಂ ಸಿದ್ದರಾಮಯ್ಯ ವಿಶ್ವಾಸ
ಮತದಾನ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆಮಿಷ ಒಡ್ಡುವುದು ಬೆದರಿಕೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿ ಎಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು ನಮ್ಮ ಶಾಸಕರು ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ ನಮ್ಮ ಶಾಸಕರನ್ನ ಒಡೆಯಲು ಇವರು ಹೊರಟಿದ್ದರು ನಮ್ಮಲ್ಲಿರುವ 19 ಶಾಸಕರು ಒಗ್ಗಟ್ಟಾಗಿದ್ದೇವೆ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಈಜಿಪ್ಟ್: ‘ನೈಲ್ ನದಿಯಲ್ಲಿ’ ದೋಣಿ ಮುಳುಗಿ 10 ಕಟ್ಟಡ ಕಾರ್ಮಿಕರು ಸಾವು
ಕಳೆದ ಮೇನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜೆಡಿಎಸ್ 12 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರಲು ಆವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರಲು ತಯಾರಾಗಿದ್ದಾರೆ ಎಂದು ಕಳೆದ 10 ತಿಂಗಳಿಂದ ಸತತವಾಗಿ ಕಾಂಗ್ರೆಸ್ ನಾಯಕರು ಹೇಳುತ್ತಲೇ ಇದ್ದಾರೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುತ್ತೇವೆ ಎಂದು ಆಮೀಷಗಳನ್ನು ಒಡ್ಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಆರೋಪಿಸಿದರು.
ಗಂಡ ಹೆಂಡತಿ ಜಗಳ ಆಡೋದು ಈ ವಿಷಯಕ್ಕೆ; ಆದಷ್ಟು ಈ ಸಂಗತಿಗಳನ್ನು ದೂರಮಾಡಿ
ಶರಣಗೌಡ ಕುಂದಕೂರ್ ಹಾಗೂ ಕರೆಮ್ಮ ನಾಯಕ್ ಪಕ್ಷ ತೊರೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಅಂತದ್ದೇನು ಇಲ್ಲ ನಮ್ಮ ಶಾಸಕರಲ್ಲಿ ಬದ್ಧತೆ ಇದೆ ನಮ್ಮ 19 ಶಾಸಕರು ಒಗ್ಗಟ್ಟಾಗಿದ್ದೇವೆ. ಮನೆ ಅಂದಮೇಲೆ ಸಣ್ಣಪುಟ್ಟ ಜಗಳ ಇದ್ದೇ ಇರುತ್ತದೆ ಅದನ್ನು ದೊಡ್ಡದಾಗಿ ಮಾಡುವುದಕ್ಕಿಂತ ಸಮಸ್ಯೆನಾ ಬಗೆ ಹರಿಸಿಕೊಳ್ಳುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.