ಯಾದಗಿರಿ: ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೇ ಚಿಕಿತ್ಸೆ ಫಲಿಸದೇ ನಿಧನರಾಗಿದ್ದರು. ಇಂತಹ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸುರಪುರದಲ್ಲಿ ನೆರವೇರಿಸಲಾಯಿತು.
ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ನಿನ್ನೆಯೇ ಸುರಪುರಕ್ಕೆ ಕೊಂಡೊಯ್ಯಲಾಗಿತ್ತು. ಇಂದು ಬೆಳಿಗ್ಗೆಯಿಂದ ಗಣ್ಯರು, ಸಾರ್ವಜನಿಕರ ದರ್ಶನಕ್ಕೆ ಮೃತ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಂತಿಮ ದರ್ಶನದ ಬಳಿಕ, ಸುರಪುರದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಸುರಪುರದ ರಾಜಮನೆತದನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥೀವ ಶರೀರಕ್ಕೆ ಅವರ ಪುತ್ರ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಪಂಚಭೂತಗಳಲ್ಲಿ ಲೀನರಾಗದರು.
ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ. ರಾಜಾಯ ವೆಂಕಪಟ್ಟ ನಾಯಕ ಕುಟುಂಬದ ಜೊತೆ 50 ವರ್ಷಗಳಿಂದ ಒಡನಾಟವಿತ್ತು. ನನ್ನ ಸಾಕಷ್ಟು ಕೆಲಸ ಮಾಡಿದ್ದರು ಎಂಬುದಾಗಿ ಹೇಳಿದರು.
ಮುತವರ್ಜಿ ವಹಿಸಿ ನೀರಾವರಿ ಯೋಜನೆ ಅಭಿವೃದ್ಧಿ ಮಾಡಿದ್ದರು. ರಾಜಾ ವೆಂಕಟಪ್ಪ ನಾಯಕ ಅವರ ಅಗಲಿಕೆ ತುಂಬಲಾರದ ನಟ್ಟವಾಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವಂತ ಶಕ್ತಿಯನ್ನು ಕೊಡಲಿ ಎಂಬುದಾಗಿ ಸಂತಾಪ ಸೂಚಿಸಿದರು.
BREAKING: ‘ಸಂಪಾದಿತಲೇ ಪರಾಕ್’: ವರ್ಷದ ಭವಿಷ್ಯವಾಣಿ ‘ಮೈಲಾರದ ಕಾರ್ಣಿಕ ನುಡಿ’
ಶಿವಮೊಗ್ಗ: ಫೆ.28ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ನಾಳೆ ‘ರಾಜ್ಯಸಭಾ ಚುನಾವಣೆ’ ಹಿನ್ನಲೆ: ಇಂದಿನಿಂದ ಫೆ.28ರವರೆಗೆ ‘ವಿಧಾನಸೌಧ’ದ ಸುತ್ತ ‘ನಿಷೇಧಾಜ್ಞೆ’ ಜಾರಿ