ದಾವಣಗೆರೆ : ಟೈರ್ ಸ್ಫೋಟಗೊಂಡು ಬೋಲೆರೋ ವಾಹನ ಒಂದು ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ದು 6 ಜನರಿಗೆ ಗಾಯವಾಗಿರುವ ದುರ್ಘಟನೆ ದಾವಣಗೆರೆ ನಗರದ ಹೊರವಲಯದಲ್ಲಿರುವ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
‘ಪ್ಯಾರೆಸಿಟಮಾಲ್’ ಯಕೃತ್ತಿನ ಅಪಾಯವನ್ನು ಉಂಟುಮಾಡಬಹುದು: ಅಧ್ಯಯನದಿಂದ ಶಾಕಿಂಗ್ ವರದಿ ಬಹಿರಂಗ
ದಾವಣಗೆರೆ ನಗರದ ಹೊರವಲಯದಲ್ಲಿ ತಡರಾತ್ರಿ ಈ ಒಂದು ಅಪಘಾತ ನಡೆದಿದೆ. ಘಟನೆಯಲ್ಲಿ ಬುಲೆರೋ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತಪಟ್ಟವರೆಲ್ಲರೂ ಆಂಧ್ರ ಮೂಲದವರೆಂದು ಹೇಳಲಾಗುತ್ತಿದೆ.ಗಾಯಾಳುಗಳ ಪೈಕಿ ಐದು ಜನರಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು ಆತನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ.
LIFE STYLE: ಬಾಯಲ್ಲಿ ಪದೇ ಪದೇ ಹುಣ್ಣಾದರೆ ಏನು ಮಾಡಬೇಕು? ಇಲ್ಲಿದೆ ಟಿಪ್ಸ್!
ಅಪಘಾತದಲ್ಲಿ ಮೃತಪಟ್ಟವರು ಆಂಧ್ರ ಮೂಲದವರೆಂದು ಎಂದು ಹೇಳಲಾಗುತ್ತಿದೆ. ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಸಿಂಗರಾಜನಹಳ್ಳಿ ನಿವಾಸಿಗಳು ಎಂದು ಹೇಳಲಾಗುತ್ತಿದೆ ಹಾವೇರಿ ಜಿಲ್ಲೆ ಬ್ಯಾಡಿಗೆಯಿಂದ ಮೆಣಸಿನಕಾಯಿ ಖರೀದಿಗೆ ಊರಿಗೆ ತೆರಳಿ ವಾಪಸ್ ಬರುವ ಸಂಪತ್ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ದಾವಣಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
27ಕ್ಕೂ ಹೆಚ್ಚು ರಾಜ್ಯಗಳಲ್ಲಿ 41000 ಕೋಟಿ ಮೌಲ್ಯದ 2000 ‘ರೈಲ್ವೆ ಯೋಜನೆಗಳನ್ನು’ ಉದ್ಘಾಟಿಸಲಿರುವ ಪ್ರಧಾನಿ ಮೋದಿ