ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಜಗಳ ಆಡದೇ ಇರಲು ಸಾಧ್ಯವೇ ಇಲ್ಲ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಆಗುತ್ತಲೇ ಇರುತ್ತವೆ. ಹೀಗೆ ಮನೆಯಲ್ಲಿ ಗಂಡ ಮಾಡುವ ಸಣ್ಣಪುಟ್ಟ ತಪ್ಪುಗಳಿಗೆ ಹೆಂಡತಿಗೆ ಸಹಿಸಲು ಆಗುವುದಿಲ್ಲ. ಹೆಂಡತಿ ಪದೇ ಪದೇ ಕೋಪಗೊಳ್ಳಲು ಆ ಕಾರಣಗಳೇನು ಎಂದು ನೀವೆ ತೀಳಿದುಕೊಳ್ಳಿ.
ಮನೆಯಲ್ಲಿ ಪತ್ನಿಯ ಮಾತಿಗೆ ಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಪತ್ನಿಗೆ ಸಹಜವಾಗಿ ಕೋಪ ಬಂದೇ ಬರುತ್ತದೆ. ಪತ್ನಿ ಮಾತನಾಡುತ್ತಿದ್ದಾಗ ಪತಿರಾಯ ಮೊಬೈಲ್‌ನಲ್ಲಿಯೇ ಮುಳಿಗಿದರೆ ಪತ್ನಿಗೆ ಕೋಪ ಬರೋದು ಸಹಜ. ಆಕೆ ಹೇಳುವ ಮಾತಿಗೆ ಉತ್ತರ ನೀಡಿ. ಬೇಕು ಬೇಡಗಳನ್ನು ತಿಳಿಸಿ, ಸಾಧ್ಯವಾದಷ್ಟು ಆಕೆಯ ಮಾತಿಗೆ ಗಮನಕೊಡಿ, ಪ್ರತಿಕ್ರಿಯೆ ನೀಡಿ.
ಮನೆಯನ್ನು ಶುಚಿತ್ವ ಇಟ್ಟುಕೊಳ್ಳದ್ದಿದ್ದರೆ ಹೆಂಡತಿ ಕೋಪಗೊಳ್ಳುತ್ತಾಳೆ. ಪುರುಷರು ತಾವು ತೊಟ್ಟ ಬಟ್ಟೆಗಳನ್ನು ಎಲ್ಲಂದರಲ್ಲಿ ಬೀಸಾಡುವುದು, ಉಟ್ಟ ಬಟ್ಟೆಯಲ್ಲಿ ತೊಳೆಯಲು ಹಾಕದೇ ಇರುವುದು. ಹೀಗೆ ಮನೆಯಲ್ಲಾ ಬಟ್ಟೆ ಬೀಸಾಡಿದರೆ ಆಕೆಯ ಕೋಪ ನೆತ್ತಿಗೇರುತ್ತದೆ. ಮನೆ ಶುಚಿತ್ವ ಕಾಪಾಡುವ ಹೊಣೆ ನಿಮ್ಮದೂ ಆಗಿರುತ್ತದೆ.
ಬಾತ್‌ರೂಮ್ ವಿಷಯವಾಗಿ ಸಹ ಆಕೆಗೆ ಗಂಡನ ಮೇಲೆ ಕೋಪಗೊಳ್ಳುವ ಅದೆಷ್ಟೊ ಪ್ರಸಂಗಗಳು ಇವೆ. ಬಾತ್‌ರೂಮ್ ಅನ್ನು ಉಪಯೋಗಿಸಿದ ಮೇಲೆ ಸರಿಯಾಗಿ ನೀರು ಹಾಕದೇ ಇರುವುದು. ಕಮೋಡ್ ಸರಿಯಾಗಿ ಫ್ಲಶ್ ಮಾಡದೇ ಇರುವುದು. ಶೇವ್ ಮಾಡಿದ ಮೇಲೆ ಸಿಂಕ್‌ನ್ನು ಹಾಗೆಯೇ ಬಿಟ್ಟುಬಿಡುವುದು ಇವೆಲ್ಲಾ ಹೆಂಡತಿಗೆ ತುಂಬಾ ಬೇಜಾರು ತರಿಸುತ್ತದೆ. ಆದಷ್ಟು ನೀವು ಉಪಯೋಗಿಸಿದ ಬಾತ್‌ರೂಮ್ ಅನ್ನು ಶುಚಿಗೊಳಿಸಿಯೇ ಆಚೆ ಬನ್ನಿ. ಇದರಿಂದ ನಿಮ್ಮಾಕೆ ಕೋಪಗೊಳ್ಳೋದು ಕಡಿಮೆ ಯಾಗುತ್ತದೆ.
ಮನೆಯ ಎಲ್ಲಾ ಕೆಲಸ ಆಕೆಯೇ ಮಾಡಬೇಕೆಂಬ ರೂಲ್ಸ್ ಬೇಡ. ಎಲ್ಲದಕ್ಕೂನಿಮ್ಮಾಕೆಯ ಮೇಲೆ ಡಿಪೆಂಡ್ ಆಗಬೇಡಿ. ನೀರು ಕೊಡು, ಟವೆಲ್ ಕೊಡು, ಹೀಗೆ ಸಣ್ಣ ಪುಟ್ಟ ಕೆಲಸವನ್ನು ಆಕೆಗೆ ಹೇಳಬೇಡಿ. ಇದರಿಂದ ಆಕೆಗೆ ಕಿರಿಕಿರಿ ಉಂಟಾಗಬಹುದು. ಈ ಕಿರಿಕಿರಿ ಒಂದು ದಿನ ಕೋಪ ಜಗಳಕ್ಕೂ ಕಾರಣವಾಗಬಹುದು ಎಚ್ಚರ. ಆದಷ್ಟು ನಿಮ್ಮ ನಿಮ್ಮ ಕೆಲಸ ನೀವೆ ಮಾಡಿಕೊಂಡರೆ ಒಳಿತು.
ಮನೆಯಲ್ಲಿದ್ದಾಗ ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳಿಗಿದರೆ ನಿಮ್ಮಾಕೆಗೆ ಖಂಡಿತವಾಗಿಯೂ ಕೋಪ ಬರುತ್ತದೆ. ಎಟ್ಲೀಸ್ಟ್ ಮನೆಯಲ್ಲಿದ್ದಾಗಲಾದರೂ ನಿಮ್ಮಾಕೆಯೊಂದಿಗೆ ಉತ್ತಮ ಸಮಯ ಕಳೆಯಿರಿ.