ಉತ್ತರಕನ್ನಡ : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮನೆಯ ಯಜಮಾನಿಯರಿಗೆ ಜಾರಿ ಮಾಡಿರುವಂತಹ ಮಹತ್ವದ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಇನ್ನೂ ಹಲವಾರು ಮಹಿಳೆಯರು ನೊಂದಣಿ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ.ಆದರೆ ಇದರ ತದ್ವಿರುದ್ಧವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೋಜನೆಗೆ ಅರ್ಹರಿದ್ದ 900ಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
BREAKING:ದೆಹಲಿ, ಹರಿಯಾಣ, ಗುಜರಾತ್, ಚಂಡೀಗಢ, ಗೋವಾದಲ್ಲಿ ಎಎಪಿ-ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದ
ರಾಜ್ಯ ಸರ್ಕಾರವು ಯೋಜನೆಯಡಿ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2 ಸಾವಿರ ಜಮಾ ಮಾಡುತ್ತದೆ. ಜಿಲ್ಲೆಯಲ್ಲಿ 2023ರ ಆಗಸ್ಟ್‌ನಿಂದ ಈವರೆಗೆ 3,13,198 ಯಜಮಾನಿಯರು ಯೋಜನೆಯಡಿ ನೋಂದಣಿ ಆಗಿದ್ದಾರೆ. ಇನ್ನೂ ಕೆಲ ತೆರಿಗೆ ಪಾವತಿದಾರರು, ರೇಷನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವರೂ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಯಜಮಾನಿಯರು ಸಲ್ಲಿಸಿದ ದಾಖಲೆಗಳು ತಾಳೆಯಾಗುತ್ತಿಲ್ಲ. ಅವುಗಳ ಪರಿಶೀಲನೆ ನಡೆದಿದೆ.
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ‘ಮತಾಂತರ’ ಪ್ರಕರಣ : ಕಲಬುರ್ಗಿಯಲ್ಲಿ ಬಲವಂತದ ಮತಾಂತರಕ್ಕೆ ಯತ್ನ
ಇವೆಲ್ಲವುಗಳ ಹೊರತಾಗಿ ಯೋಜನೆಗೆ ಎಲ್ಲ ರೀತಿಯಲ್ಲೂ ಅರ್ಹರಿರುವ ಜಿಲ್ಲೆಯ ವಿವಿಧ ತಾಲ್ಲೂಕುಗಳ 992 ಯಜಮಾನಿಯರು ಸ್ವಯಂ ಪ್ರೇರಣೆಯಿಂದ ಈ ಯೋಜನೆಯ ಸೌಲಭ್ಯದಿಂದ ಹೊರಗುಳಿದಿದ್ದಾರೆ. ಆಯಾ ತಾಲ್ಲೂಕುಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಕಚೇರಿಗೆ ಸಿಕ್ಕ ಮಾಹಿತಿಯಿಂದ ಇದು ದೃಢಪಟ್ಟಿದೆ.
ಕೆಲ ಯಜಮಾನಿಯರು ರಾಜಕೀಯ ಪಕ್ಷ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ಯೋಜನೆಯಿಂದ ಹೊರಗುಳಿದಿರಬಹುದು. ಇನ್ನೂ ಕೆಲವರು ನೋಂದಣಿ ಪ್ರಕ್ರಿಯೆ ಜಟಿಲತೆಯಿಂದ ದೂರ ಉಳಿದಿರಬಹುದು. ಕೆಲ ಫಲಾನುಭವಿಗಳ ಖಾತೆಗೆ ಇನ್ನೂ ಮೊದಲ ಕಂತಿನ ಹಣ ಬಂದಿಲ್ಲ. ಅದಕ್ಕೆ ವ್ಯರ್ಥ ಪ್ರಯತ್ನ ಮಾಡುವುದು ಬೇಡವೆಂದು ಕೈಬಿಟ್ಟಿರಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.