ಬೆಂಗಳೂರು : ಖದೀಮನೊಬ್ಬ ಗ್ರಾಹಕನ ಸೋಗಿನಲ್ಲಿ ಬಂದು ಡೂಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಬರೋಬ್ಬರಿ 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕದ್ದಿರುವ ಘಟನೆ ಎಂ.ಜಿ. ರಸ್ತೆಯ ಜಾಯ್ ಅಲುಕ್ಕಾಸ್ ಮಳಿಗೆಯಲ್ಲಿ ನಡೆದಿದೆ.
ದೇವಾಲಯಗಳಿಗೆ ತೆರಿಗೆ ವಿಧಿಸುವ ಮಸೂದೆಗೆ ಮೇಲ್ಮನೆಯಲ್ಲಿ ಸೋಲು: ಕಾಂಗ್ರೆಸ್ ಗೆ ಹಿನ್ನಡೆ
ಫೆಬ್ರವರಿ 18 ರಂದು ಗ್ರಾಹಕನ ಸೋಗಿನಲ್ಲಿ ಜಾಯ್ ಅಲುಕ್ಕಾಸ್ ಮಳಿಗೆಗೆ ಎಂಟ್ರಿ ಕೊಟ್ಟ ಖದೀಮ ಡೈಮಂಡ್ ಉಂಗುರ ಕದ್ದಿದ್ದಾನೆ. ಇನ್ನು ಈ ಕಳ್ಳ ನಗರದ ಹಲವೆಡೆ ಆಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡೈಮಂಡ್ ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
BREAKING : ಉತ್ತರಪ್ರದೇಶದ ‘ಶ್ರೀಕೃಷ್ಣ ಜನ್ಮಭೂಮಿ’ ಟ್ರಸ್ಟ್‌ಗೆ ಪಾಕಿಸ್ತಾನದಿಂದ ‘ಬಾಂಬ್’ ದಾಳಿ ಬೆದರಿಕೆ ಕರೆ
ಬಸ್ ಹರಿದು ಬೈಕ್ ಸವಾರ ಸಾವು
ಬೆಂಗಳೂರಿನಲ್ಲಿ ಖಾಸಗಿ ಬಸ್ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮುರುಳಿ (40) ಮೃತ ಬೈಕ್ ಸವಾರ. ನಾಗರಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇಗುಲ ಬಳಿ ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ. ವೇಗವಾಗಿ ಬಂದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ವೇಳೆ ಸವಾರ ಕೆಳಗೆ ಬಿದಿದ್ದಾನೆ,ಆಗ ಖಾಸಗಿ ಬಸ್ ಬೈಕ್ ಸವಾರನ ಮೇಲೆ ಹರಿದಿದೆ.
ಮಗಳ ಮದುವೆಯ ಸಿದ್ಧತೆಯಲ್ಲಿದ್ದ ಪೋಷಕರಿಗೆ ಅಘಾತ : ದುಬೈ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವತಿ ಸಾವು
ತಲೆ ಮೇಲೆ ಖಾಸಗಿ ಬಸ್ ಚಕ್ರ ಹರಿದು ಸವಾರ ಮುರಳಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್, ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರಿಸಲಾಗಿದೆ.