ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಪೀಕ್ ಆವರ್‌ಗಳಲ್ಲಿ ಆಗುತ್ತಿದ್ದ ತೊಂದರೆ ತಪ್ಪಿಸಲು ಹೆಚ್ಚುವರಿ ರೈಲು ಸೇವೆ ಒದಗಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂದು ತಿಳಿದುಬಂದಿದೆ. ಏಕೆಂದರೆ ಈ ಒಂದು ಮಾರ್ಗದಲ್ಲಿ ಅತ್ಯಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿರುವುದರಿಂದ ಯಾವುದೇ ರೀತಿಯಾಗಿ ಸಮಸ್ಯೆ ಆಗಬಾರದೆಂದು ಬಿಎಂಆರ್‌ಸಿಎಲ್ ಹೆಚ್ಚುವರಿ ಸೇವೆ ಒದಗಿಸಲು ಮುಂದಾಗಿದೆ.
26ರಿಂದ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣ ಮತ್ತು ಗರುಡಾಚಾರ್ ಪಾಳ್ಯ ನಿಲ್ದಾಣಗಳ ನಡುವೆ ಬೆಳಗ್ಗೆ 8.45 ರಿಂದ 10.20 ರವರೆಗೆ ಪ್ರತಿ ನಿಮಿಷಕ್ಕೆ ಮೆಟ್ರೋ ಮೂರು ರೈಲುಗಳು ಸಂಚರಿಸಲಿವೆ. ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಈ ಸೇವೆ ಇರಲಿದೆ. ಕಳೆದ ಎರಡು ದಿನಗಳ ಹಿಂದೆ ತಾಂತ್ರಿಕ ದೋಷದಿಂದ ಈ ಮಾರ್ಗದ ಪ್ರಯಾಣಿಕರು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆ ಬಗ್ಗೆ ಹರಿಸಲು ಇದೀಗ ಬಿಎಂಆರ್‌ಸಿಎಲ್ ಹೆಚ್ಚುವರಿ ರೈಲು ಸೇವೆ ಒದಗಿಸಲು ಮುಂದಾಗಿದೆ.
2027 ರ ವೇಳೆಗೆ 3,500 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ ‘ಬಾಷ್’| Bosch Layoffs 2024
ಇದರಿಂದ ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆ.ಆರ್. ಪುರ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಭಾರತೀಯ ರೈಲ್ವೆ ಹಾಗೂ ಇಂಟರ್‌ಸಿಟಿ ಬಸ್ ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ಮೆಜೆಸ್ಟಿಕ್‌ನಿಂದ ಎಲ್ಲ ಭಾಗಗಳಿಗೆ ಮೊದಲ ರೈಲು ಬೆಳಗ್ಗೆ 5 ಗಂಟೆಗೆ ಪ್ರಾರಂಭವಾಗಲಿದೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಈ ಸೇವೆ ಇರಲಿದೆ.