ಉತ್ತರಕನ್ನಡ : ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಸಿದ್ರಾಮುಲ್ಲಾಖಾನ್ ಗೆ ನೌಕರರಿಗೆ ಕೊಡಲು ಸಂಬಳಕ್ಕೆ ಹಣವಿಲ್ಲ ಆದರೆ ಮುಸ್ಲಿಮರ ತುಷ್ಟಿಕರಣ ಮಾಡಲು ಅವರ ಬಳಿ ಹಣವಿದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮಂಡ್ಯವನ್ನು ಬಿಜೆಪಿಗೆ ಉಳಿಸಿಕೊಳ್ಳಲು ಹೋರಾಟ:ಸಂಸದೆ ಸುಮಲತಾ
ಮೋದಿ ಕೊಟ್ಟ ಯೋಜನೆಗಳಿಂದ ದೇಶ ದಿವಾಳಿಯಾಗಿಲ್ಲ. ಸಿದ್ದರಾಮಯ್ಯ ನೌಕರರಿಗೆ ಸಂಬಳಕ್ಕೆ ಹಣವಿಲ್ಲ. ರಾಜ್ಯ ದಿವಾಳಿ ಮಾಡಿ ವೋಟು ಪಡೆಯಲು ಹೊರಟಿದ್ದಾರೆ.ಇಷ್ಟು ಹೇಸಿಗೆ ದರಿದ್ರ ಸರ್ಕಾರವನ್ನು ನಾನು ನೋಡಿದೆ ಇಲ್ಲ. ಕೇಂದ್ರ ಸರ್ಕಾರ ತೆರಿಗೆ ಹಣ ಕೊಟ್ಟಿಲ್ಲ ಅಂತ ಹೇಳುತ್ತಾರೆ.ತಮಿಳುನಾಡು ಆಂಧ್ರದವರಿಗೆ ಇಲ್ಲದ ವೇದನೆ ಇವರಿಗೆ ಏಕೆ? ಅವರಿಗೆ ಎಲ್ಲಾ ಸರಿ ಹೋಗುತ್ತಿದೆ, ಸಿದ್ದರಾಮಯ್ಯ ಏಕೆ ವೇದನೆ? ಎಂದು ಪ್ರಶ್ನಿಸಿದ್ದಾರೆ.
BIG BREAKING : ‘ಏಕರೂಪ ಸಂಹಿತೆ’ಯತ್ತ ಹೆಜ್ಜೆಯಿಟ್ಟ ಅಸ್ಸಾಂ ಸರ್ಕಾರ: ಸಂಪುಟದಲ್ಲಿ ‘ಮುಸ್ಲಿಂ ವಿವಾಹ’ ಕಾಯ್ದೆ ರದ್ದು
ಲೆಟರ್ ಗೆ ಸಿದ್ದರಾಮಯ್ಯ ದುರಂಕಾರದಿಂದ ಸಹಿ ಹಾಕಿದ್ದಾರೆ. ಓಸಿ ಚೀಟಿಗಾದರೂ ಬೆಲೆ ಇರುತ್ತೆ ರೂ.1 ಕೊಟ್ಟರೆ 80 ಕೊಡುತ್ತಾರೆ. ಓಸಿ ಚೀಟಿ ಬರೆದಂತೆ ಫೈಲ್ ಬರಿತಾರೆ ಅಷ್ಟು ಅಹಂಕಾರ ಅವರಿಗೆ.ನಮ್ಮ ಹಳ್ಳಿಗಳಲ್ಲಿ ಎಷ್ಟು ದೇವಸ್ಥಾನಗಳು ದುಡ್ಡು ಇಲ್ಲದೆ ಹಾಳುಬಿದ್ದಿವೆ. ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಇಂದು ದುಡ್ಡು ಕೊಡುತ್ತಾರೆ. ಆದರೆ ನಮ್ಮ ದೇವರುಗಳಿಗೆ ಹಣ ಕೊಡಲು ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ನಾವು ಕೊಟ್ಟಿರೋ ತೆರಿಗೆದಿಂದ ಸರ್ಕಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜಕಾರಣ ಬೇಡವೆಂದು ಗಟ್ಟಿ ಮನಸು ಮಾಡಿಕೊಂಡಿದ್ದೆ. ಆದರೆ ಅದೇನು ಗೊತ್ತಿಲ್ಲ ಯೂಟರ್ನ್ ಮಾಡಿ ಮತ್ತೆ ಬಂದಿದ್ದೇನೆ.ನಾನು ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪ ಸ್ವಲ್ಪ ಕೆಲಸವನ್ನು ಮಾಡಿದ್ದೇನೆ.
ಕಳೆದ ಎರಡು ಚುನಾವಣೆಯಲ್ಲಿ ರಾಜಕಾರಣ ಬೇಡ ಬಿಟ್ಟು ಬಿಡಿ ಅಂದಿದ್ದೆ ಆದರೆ ಸಂಘಟನೆಯವರು ನನ್ನನ್ನು ಬಿಡಲ್ಲ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ.ಕ್ಷೇತ್ರದ ಜನರ ಮುಂದೆ ಹೋದರೆ ನಿಮಗೆ ಬೇರೆ ಅಭ್ಯರ್ಥಿ ಸಿಗುವುದಿಲ್ಲ ಹೀಗಾಗಿ ಮತ್ತೆ ನನಗೆ ಟಿಕೆಟ್ ಕೊಡುತ್ತೀರಾ? ಎಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಬಿಜೆಪಿ ಸಂಸದ ಹೆಗಡೆ ಪ್ರಶ್ನಿಸಿದರು.