ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ನೀಡಿದರು, ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ವಿಚಾರಣೆಗೆ ಹಾಜರಾಗಿಲ್ಲ. ಇದೀಗ ಕೋರ್ಟ್ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಒಂದು ವೇಳೆ ಈ ಬಾರಿ ವಿಚಾರಣೆ ಹಾಜರಾಗದಿದ್ದರೆ ಬಂಧನದ ಆದೇಶ ನೀಡುವುದು ಎಚ್ಚರಿಕೆ ನೀಡಿದೆ.
‘ಮದುವೆ’ಯಿಂದ ಹಿಂದೆ ಸರಿಯುವುದು ‘IPC ಸೆಕ್ಷನ್ 417’ರಡಿ ಮೋಸದ ಅಪರಾಧವಲ್ಲ – ಸುಪ್ರೀಂ ಕೋರ್ಟ್
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಖಾಸಗಿ ದೂರು ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ರದ್ದುಪಡಿಸಲು ಕೋರಿ ಬಿ. ಶ್ರೀರಾಮುಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಈ ಎಚ್ಚರಿಕೆ ನೀಡಿದೆ.
BIG NEWS : ‘ED’ ವಿರುದ್ಧ ಪ್ರತಿಭಟನೆ ನಡೆಸಿದ್ದ ಆರೋಪ : ‘ನಲಪಾಡ್’ ವಿರುದದ ಕೇಸ್ ರದ್ದುಪಡಿಸಿದ ಹೈಕೋರ್ಟ್
ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಶ್ರೀರಾಮುಲು ಅವರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗದಿರುವ ಬಗ್ಗೆ ಹಾಗೂ ಈವರೆಗೆ ನಾಲ್ಕು ಸಮನ್ಸ್ ಕಳಿಸಲಾಗಿದೆ ಎಂಬ ಮಾಹಿತಿಯನ್ನು ಶ್ರೀರಾಮುಲು ಪರ ವಕೀಲ ಗೌತಮ್ ಹಾಗೂ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರಿಂದ ಪಡೆದುಕೊಂಡರು.
GTRI ಹಸಿರು ಕ್ರಾಂತಿ 2.0 ಸೂತ್ರ.! ರೈತರೇ, ಸರ್ಕಾರದ ಆಶಯದಂತೆ ‘ಬೆಳೆ’ ಬೆಳೆಯಿರಿ, ಆಗ ‘MSP’ ಗ್ಯಾರಂಟಿ
ಈ ಮಾಹಿತಿ ಕೇಳಿ ತೀವ್ರ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ಮ್ಯಾಜಿಸ್ಟ್ರೇಟ್ ಕೋರ್ಟ್ ಎಂದರೆ ನಿಮಗೆ ಅಷ್ಟೊಂದು ಸದರವೆ? ಮ್ಯಾಜಿಸ್ಟ್ರೇಟ್ ಮುಂದೆ ನಿಂತುಕೊಳ್ಳಲು ನಿಮ್ಮ ಅರ್ಜಿದಾರರಿಗೆ ಯಾವ ಅಂತಸ್ತು ಅಡ್ಡಿಯಾಗಿದೆ? ಮ್ಯಾಜಿಸ್ಟ್ರೇಟ್ ಕೋರ್ಟ್ ಎಂದರೆ ಏನೆಂದುಕೊಂಡಿದ್ದೀರಿ? ವಿಚಾರಣಾ ಕೋರ್ಟ್ ನಾಲ್ಕು ಬಾರಿ ಸಮನ್ಸ್ ಹೊರಡಿಸಿದ್ದರೂ ಏಕೆ ಹಾಜರಾಗಿಲ್ಲ ಎಂದು ಶ್ರೀರಾಮುಲು ಪರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
BREAKING : ರೈತರ ‘ದೆಹಲಿ ಚಲೋ’ ಫೆಬ್ರವರಿ 29ರವರೆಗೆ ಮುಂದೂಡಿಕೆ : ‘ಸಂಯುಕ್ತ ಕಿಸಾನ್ ಮೋರ್ಚಾ’ ಘೋಷಣೆ
ಸಚಿವ ಹಾಗೂ ಮಾಜಿ ಸಚಿವ ಅಥವಾ ಯಾರೇ ಜನಪ್ರತಿನಿಧಿ ಆಗಿರಲಿ, ನ್ಯಾಯಾಲಯ ಎಂದರೆ ಹುಷಾರಾಗಿರಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರೂಪುಗೊಂಡಿರುವ ಶಾಸಕರು-ಸಂಸದರ ವಿರುದ್ದದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ರಚನೆಯಾಗಿರುವ ವಿಶೇಷ ನ್ಯಾಯಪೀಠ ಇದಾಗಿದೆ ಎಂಬುದನ್ನು ಮರೆಯಬೇಡಿ. ಮ ನಿಮ್ಮ ವರ್ತನೆಗೆ ಈ ವಿಶೇಷ ನ್ಯಾಯಪೀಠ ಕಠಿಣ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡಲ್ಲ ಎಂದು ಎಚ್ಚರಿಕೆ ನೀಡಿತು.