ಶಿವಮೊಗ್ಗ: ನಾಳೆ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ವತಿಯಿಂದ ಸಹ್ಯಾದ್ರಿ ಗಾನ ಸಿರಿ 2024ರ ಕಾರ್ಯಕ್ರಮವನ್ನು ಆಯೋಗಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ನಟಿಸಿದ ಹಾಗೂ ಹಾಡಿದ ಹಾಡುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದ ಪ್ರಧಾನ ಸಂಪಾದಕ ರಾಘವೇಂದ್ರ ತಾಳಗುಪ್ಪ ಅವರು, ಕಳೆದ ಹಲವಾರು ವರ್ಷಗಳಿದಂ ಸುದ್ದಿ ಸಹ್ಯಾದ್ರಿ ಬಳಗವು ಸುದ್ದಿಯ ಜೊತೆಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದಿದ್ದಾರೆ.
ಫೆಬ್ರವರಿ.24ರ ನಾಳೆ ಈ ಜಗತ್ತು ಕಂಡ ಅಪರೂಪದ ನಟ, ಗಾಯ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಸವಿನೆನಪಿನ ಅಂಗವಾಗಿ ಡಾ.ರಾಜ್ ನಟಿಸಿದ ಹಾಗೂ ಹಾಡಿದ ಹಾಡುಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
4 ವಿಭಾಗಗಳಲ್ಲಿ ಸ್ಪರ್ಧೆ
ಸಹ್ಯಾದ್ರಿ ಗಾನ ಸಿರಿ 2024ರ ಡಾ.ರಾಜ್ ಕುಮಾರ್ ಹಾಡುಗಳ ಸ್ಪರ್ಧೆಯು ನಾಲ್ಕು ವಯೋಮಾನದವರಿಗೆ ನಡೆಸಲಾಗುತ್ತಿದೆ. 10 ರಿಂದ 18, 19 ರಿಂದ 30 ಹಾಗೂ 30 ವರ್ಷ ಮೇಲ್ಪಟ್ಟವರು ಈ ಹಾಡುಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ವಿಶೇಷ ಸೂಚನೆಯ ಏನೆಂದ್ರೇ ರಸಮಂಜರಿ ಗಾಯಕರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸೋದಕ್ಕೆ ಅವಕಾಶವಿಲ್ಲ. ಇತರರಿಗೆ ಮಾತ್ರವೇ ಭಾಗಿಯಾಗಿ ಹಾಡಲು ಅವಕಾಶವಿದೆ.
ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕ ಡಾ. ವಿ ನಾಗೇಂದ್ರ ಪ್ರಸಾದ್ ಭಾಗಿ
ಈ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಡಾ.ವಿ ನಾಗೇಂದ್ರ ಪ್ರಸಾದ್ ಹಾಗೂ ಇನ್ನಿತರ ನಟ-ನಟಿಯರು ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. ನಾಲ್ಕು ವಿಭಾಗದ ಸ್ಪರ್ಧಿಗಳು ಹಾಡುವಂತ ಹಾಡಿನಲ್ಲಿ ಯಾರು ಅತ್ಯುತ್ತಮವಾಗಿ ಹಾಡಿದ್ದಾರೆ ಎಂಬುದನ್ನು ಪ್ರಕಟಿಸಲಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಕ್ಯಾಶ್ ಅವಾರ್ಡ್
ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದಿಂದ ನಾಳೆ ಆಯೋಜಿಸಿರುವಂತ ಡಾ.ರಾಜ್ ಹಾಡುಗಳ ಗಾಯನ ಸ್ಪರ್ಧೆಯಲ್ಲಿ ಭಾಗಿಯಾಗಿ, ವಿಜೇತರಾದವರಿಗೆ ಆಕರ್ಷಕ ಕ್ಯಾಶ್ ಅವಾರ್ಡ್ ಜೊತೆಗೆ ಸಹ್ಯಾದ್ರಿ ಗಾನ ಸಿರಿ 2024ರ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ.
ಸಾಗರದ ಗಾಂಧಿ ಮೈದಾನ ರಂಗಮಂದಿರದಲ್ಲಿ ಸ್ಪರ್ಧೆ ಆಯೋಜನೆ
ದಿನಾಂಕ 24-02-2024ರ ನಾಳೆ ಬೆಳಿಗ್ಗೆ 10.30ಕ್ಕೆ ಸಾಗರದ ಹೃದಯಭಾಗದಲ್ಲಿರುವಂತ ಗಾಂಧಿ ಮೈದಾನದ ರಂಗಮಂದಿರದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಾಳೆ ಬೆಳಿಗ್ಗೆ 10.30ಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟನೆ
ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗ ಆಯೋಜಿಸಿರುವಂತ ಸಹ್ಯಾದ್ರಿ ಗಾನ ಸಿರಿ 2024ರ ಕಾರ್ಯಕ್ರಮವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದ್ದಿ ಸಹ್ಯಾದ್ರಿಯ ಸಂಪಾದಕರಾದಂತ ರಾಘವೇಂದ್ರ ತಾಳಗುಪ್ಪ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಗರದ ಉಪವಿಭಾಗಾಧಿಕಾರಿ ಯತೀಶ್ ಆರ್, ಪೌರಾಯುಕ್ತ ನಾಗಪ್ಪ ಹೆಚ್.ಕೆ, ಡಿಎಂಪಿಸಿ ಅಧ್ಯಕ್ಷರು ಹಾಗೂ ಚಾರ್ವಕ ಪತ್ರಿಕೆಯ ಸಂಪಾದಕರಾದಂತ ಹೆಚ್.ಬಿ ರಾಘವೇಂದ್ರ, ನಗರಸಭಾ ಸದಸ್ಯ ಗಣಪತಿ ಮಂಡಗಳಲೆ, ಜೂನಿಯರ್ ರಾಜ್ ಕುಮಾರ್ ರಾಜೇಂದ್ರ ಹಳ್ಳೂರು ಹಾಜರಿರಲಿದ್ದಾರೆ.
ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ
ನಾಳೆ ಸುದ್ದಿ ಸಹ್ಯಾದ್ರಿ ಪತ್ರಿಕಾ ಬಳಗದಿಂದ ಆಯೋಜಿಸಿರುವಂತ ಸುಹ್ಯಾದ್ರಿ ಗಾನ ಸಿರಿ 2024ರ ಕಾರ್ಯಕ್ರಮ ಸಮಾರೋಪ ಸಮಾರಂಭ ಸಂಜೆ.6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಅಧ್ಯಕ್ಷರು ಹಾಗೂ ಚಾರ್ಪಕ ಪತ್ರಿಕೆಯ ಸಂಪಾದಕರಾದಂತ ಹೆಚ್.ಬಿ ರಾಘವೇಂದ್ರ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಗೋಪಾಲಕೃಷ್ಣ ಬೇಳೂರು, ಸಾಹಿತಿ, ಖ್ಯಾತ ಸಂಗೀತ ನಿರ್ದೇಶಕ ಡಾ.ವಿ ನಾಗೇಂದ್ರ ಪ್ರಸಾದ್, ಸಿಗಂದೂರು ಧರ್ಮದರ್ಶಿ ರಾಮಪ್ಪ, ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಂತ ಆರ್ ಎಂ ಮಂಜುನಾಥ್ ಗೌಡ್ರು, ಸಾಗರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಡಾ.ರಾಜನಂದಿನಿ ಕಾಗೋಡು, ಶಿವಮೊಗ್ಗ ಕಾಂಗ್ರೆಸ್ ಮುಖಂಡ ದಿನೇಶ್ ಎಸ್ ಪಿ, ಉಳ್ಳೂರಿನ ಸಿಗಂದೂರೇಶ್ವರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದಂ ಬಿಳಗಲ್ಲೂರು ಕೃಷ್ಣಮೂರ್ತಿ ಉಪಸ್ಥಿತರಾಗಿ ಇರಲಿದ್ದಾರೆ.
ಈ ಕಾರ್ಯಕ್ರಮವನ್ನು ವಸಂತ ಬಿ ಈಶ್ವರಗೆರೆ, ಸಾಗರ ತಾಲೂಕು ಡಿಎಸ್ಎಸ್ ಸಂಚಾಲಕ ಅಣ್ಣಪ್ಪ ಕೆಳದಿಪುರ, ನಟರಾಜ್ ಸಂಯೋಜಿಸಲಿದ್ದಾರೆ.
BREAKING : ಪೇಟಿಎಂ ‘UPI’ ಕಾರ್ಯಾಚರಣೆ ಮುಂದುವರಿಕೆಗೆ ಸಹಾಯ ಮಾಡುವಂತೆ ‘NPCI’ಗೆ ‘RBI’ ಸೂಚನೆ
ಮೇಲ್ಮನೆಯಲ್ಲಿ ನೀರಾ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಸ್ತಾಪದಿಂದ ಸ್ವಾರಸ್ಯಕರ ಚರ್ಚೆ