ಬೆಂಗಳೂರು : ವಿಧಾನಸಭೆಯಲ್ಲಿ ಅನುದಾನ ತಾರತಮ್ಯದ ನಿರ್ಣಯ ಅಂಗೀಕಾರ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಜೆಡಿಎಸ್ ಪಾದಯಾತ್ರೆ ಮೂಲಕ ರಾಜಭವನ ಚಲೋ ಹಮ್ಮಿಕೊಂಡು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಗೆ ದೂರು ಸಲ್ಲಿಸಲು ನಿರ್ಧಾರಿಸಲಾಗಿತ್ತು.
UPDATE : ‘ಅಯೋಧ್ಯೆ’ ಯಾತ್ರಿಕರಿಗೆ ರೈಲಿನಲ್ಲಿ ‘ಬೆದರಿಕೆ’ ಪ್ರಕರಣ : FIR ದಾಖಲು, ಓರ್ವ ವಶಕ್ಕೆ
ಅದರೆ ಸೋಮವಾರ ಅಥವಾ ಮಂಗಳವಾರ ವಿಧಾನಸಭೆ ಬಜೆಟ್ ಅಧಿವೇಶನ ವಿಸ್ತರಣೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ ಭವನ ಚಲೋ ಪಾದಯಾತ್ರೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.ವಿಧಾನಸಭೆಯಿಂದ ಇಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.ಸೋಮವಾರ ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ಈ ಕುರಿತು ದೂರು ಸಲ್ಲಿಸಲಿವೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕಿತ್ತು. ಆದರೆ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿಧಾನಸಭೆ ಅಧಿವೇಶನ ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಸೋಮವಾರ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಹಾಗೂ ಮಂಗಳವಾರ ವಿಧಾನಸಭೆ ಅಧಿವೇಶನ ಎರಡು ದಿನ ವಿಸ್ತರಣೆ ಸಾಧ್ಯತೆ ಎನ್ನಲಾಗುತ್ತಿದೆ. ಇತ್ತೀಚಿಗೆ ಗಂಟಲು ನೋವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾರೋಗ್ಯದಿಂದ ಬಳಲಿದ್ದರೂ.