ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ ವಸತಿ ಮತ್ತು ವಾಣಿಜ್ಯ ಆಸ್ತಿದಾರರ 5 ವರ್ಷಕ್ಕಿಂತ ಹಿಂದಿನ ಬಾಕಿಯ ಬಡ್ಡಿ ಮನ್ನಾಗೆ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಬೆಂಗಳೂರಿನ ಆಸ್ತಿ ತೆರಿಗೆದಾರರಿಗೆ ಸಂತಸದ ಸುದ್ದಿ ಎನ್ನುವಂತೆ ಆಸ್ತಿ ತೆರಿಗೆದಾರರ ಸ್ನೇಹಿ ಬಿಬಿಎಂಪಿ ತಿದ್ದುಪಡಿ ವಿಧೇಯಕ-2024 ಜಾರಿಯಾಗಿದೆ ಎಂದಿದ್ದಾರೆ.
ಈ ಬಿಬಿಎಂಪಿ ತಿದ್ದುಪಡಿ ವಿಧೇಯಕದಂತೆ 1000 ಚದುರ ಅಡಿಯವರೆಗಿನ ಸ್ವಯಂ ಬಳಕೆ ಅಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗುತ್ತಿದೆ. ಬಾಕಿ ಇರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇ.50ರಷ್ಟು ಕಡಿತ ಮಾಡಲಾಗುತ್ತಿದೆ. ಬೆಂಗಳೂರಿಗರಿಗೆ 2700 ಕೋಟಿ ಉಳಿತಾಯವಾಗಲಿದೆ ಎಂದಿದ್ದಾರೆ.
ಇನ್ನೂ ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇಲ್ಲ. ಇದರಿಂದ ಬೆಂಗಳೂರಿನ 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5 ರಿಂದ 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಸೇರಿ 13 ಲಕ್ಷದಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
BIG Alert: ಪೋಷಕರೇ..! ನೀವು ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸ್ತಾ ಇದ್ದೀರಾ.? ಇಲ್ಲಿದೆ ‘ಶಾಕಿಂಗ್ ನ್ಯೂಸ್’
BREAKING : ಲೈಂಗಿಕ ದೌರ್ಜನ್ಯ ಪ್ರಕರಣ : ಮಾಜಿ ಫುಟ್ಬಾಲ್ ಆಟಗಾರ ‘ಡ್ಯಾನಿ ಅಲ್ವೆಸ್’ಗೆ 4.5 ವರ್ಷ ಜೈಲು