ಬೆಂಗಳೂರು : ಬೆಂಗಳೂರು ನಗರದ ಹೊರವಲಯದಲ್ಲಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 22.5 ಲಕ್ಷದ 370 ಗ್ರಾಂ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಇದೀಗ ಜಪ್ತಿ ಮಾಡಿಕೊಂಡು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
BREAKING : ‘ಸಿಎಂಗೆ’ ಮತ್ತೆ ಸಂಕಷ್ಟ : ‘ಲಂಚ ಪ್ರಕರಣ’ದಲ್ಲಿ ಮರು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ
ಶಾರ್ಜಾ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಳಿದ ಪ್ರಯಾಣಿಕನೊಬ್ಬ ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ. ಪ್ರಯಾಣಿಕ ಶಾರ್ಜಾ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಪಿ ಬಂದಿದ್ದ ಎನ್ನಲಾಗುತ್ತಿದೆ.
ನಾನು ‘ಕಾಮನ್ ಮ್ಯಾನ್’ ಆಗಿರಲು ಇಷ್ಟಪಡುತ್ತೇನೆ : MP ಚುನಾವಣೆ ಕುರಿತು ಸ್ಪಷ್ಟನೆ ನೀಡಿದ ಡಾಲಿ ಧನಂಜಯ
ಅಧಿಕಾರಿಗಳ ಕಣ್ತಪ್ಪಿಸಲು ಆರೋಪಿ ಡಿಸೈನ್ ಆಗಿ ಪ್ಯಾಂಟ್ ಮಾಡಿಸಿದ್ದ ಎನ್ನಲಾಗುತ್ತಿದೆ. ಪ್ಯಾಂಟ್ ಒಳಗಡೆ ಲೇಯರ್ ಗಳನ್ನು ಮಾಡಿ ಚಿನ್ನ ಅಡಗಿಟ್ಟಿಸಿದ್ದ. ಈ ವೇಳೆ ಅನುಮಾನ ಗೊಂಡ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸಿದ್ದಾರೆ.
ಗಾಜಾದ ನುಸೆರಾತ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 17 ಮಂದಿ ಸಾವು | Israel-Hamas War
ಇದೇ ವೇಳೆ ಆತ ಪ್ಯಾಂಟ್ ಒಳಗಡೆ ಲೇಯರ್ ಗಳಲ್ಲಿ ಅಕ್ರಮವಾಗಿ ಚಿನ್ನವನ್ನು ಪೌಡರ್ ರೂಪದಲ್ಲಿ ಇದ್ದಿದ್ದು ಕಂಡು ಕಸ್ಟಮ್ ಅಧಿಕಾರಿಗಳು ಬೆರಗಾಗಿದ್ದಾರೆ. ಈ ವೇಳೆ 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನವನ್ನು ಈಗ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.