Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC ಹಾಲ್ ಆಫ್ ಫೇಮ್‌ಗೆ ಎಂಎಸ್ ಧೋನಿ ಸೇರ್ಪಡೆ

09/06/2025 10:22 PM

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ‘ಗ್ಯಾರಂಟಿ ಯೋಜನೆ’ ಅನುಷ್ಠಾನಕ್ಕೆ ಗ್ಯಾರಂಟಿ ಸ್ವಯಂ ಸೇವಕರ ನೇಮಕ ಮಾಡಿ ಆದೇಶ
KARNATAKA

ರಾಜ್ಯ ಸರ್ಕಾರದಿಂದ ‘ಗ್ಯಾರಂಟಿ ಯೋಜನೆ’ ಅನುಷ್ಠಾನಕ್ಕೆ ಗ್ಯಾರಂಟಿ ಸ್ವಯಂ ಸೇವಕರ ನೇಮಕ ಮಾಡಿ ಆದೇಶ

By kannadanewsnow0922/02/2024 5:35 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಗ್ಯಾರಂಟಿ ಸ್ವಯಂ ಸೇವಕರನ್ನು ನೇಮಕ ಮಾಡಿ ಆದೇಶಿಸಿದೆ. ಇವರು ಮನೆ ಮನೆಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.

ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ಸರ್ಕಾರವು ಬಡವರ ಹಾಗೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗ್ರಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಪ್ರತಿ ಮನೆ ಮನೆಗೂ ಈ ಐದು ಗ್ಯಾರಂಟಿ ಯೋಜನೆಗಳು ಸರಿಯಾದ ರೀತಿಯಲ್ಲಿ ತಲುಪಿವೆಯೇ ಎಂಬ ಬಗ್ಗೆ ರಾಜ್ಯ ವ್ಯಾಪ್ತಿ ಸಮೀಕ್ಷೆ ಮಾಡಲು “ಗ್ಯಾರಂಟಿ ಸ್ವಯಂ-ಸೇವಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದಿದೆ.

ಮುಂದುವರೆದು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ಗ್ಯಾರಂಟಿ ಸ್ವಯಂ-ಸೇವಕರಾಗಿ ನೇಮಿಸಿ ಅವರುಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳು ತಲುಪಿರುವ ಬಗ್ಗೆ ಹಾಗೂ ಸದರಿ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಮತ್ತು ಅದರ ಸದ್ಬಳಕೆ ಆಗುತ್ತಿರುವ ಕುರಿತು ಒಂದು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು. ಸದರಿ ಕೆಲಸಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನವನ್ನು ಸಹ ನೀಡಲು ತೀರ್ಮಾನಿಸಿದೆ ಎಂದು ಹೇಳಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗ್ರಹಜ್ಯೋತಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳು ಸರಿಯಾದ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿರುವ ಕುರಿತಂತ ಮನೆ ಮನೆಗಳಿಗೆ ತೆರಳಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳನ್ನೊಳಗೊಂಡಂತೆ 1.2 ಲಕ್ಷ ಗ್ಯಾರಂಟಿ ಸ್ವಯಂ ಸೇವಕರಿಂದ 10 ರಿಂದ 15 ದಿನಗಳ ಅವಧಿಯಲ್ಲಿ ಒಂದು ಬಾರಿ ಒಬ್ಬರಿಗೆ ಮಾತ್ರ ರೂ. 1000/- ದಂತೆ ಪ್ರೋತ್ಸಾಹಧನ ನೀಡಿ ರಾಜ್ಯ ವ್ಯಾಪ್ತಿ ಸಮೀಕ್ಷೆ ನಡೆಸಲು ಈ ಕೆಳಕಂಡ ಷರತ್ತಿಗೊಳಪಟ್ಟು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ.

1. ಈ ಸಮೀಕ್ಷೆ ಕಾರ್ಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ನಡೆಯತಕ್ಕದ್ದು.
2. ಈ ಸಮೀಕ್ಷೆಗೆ ಪತಿ “ಗ್ಯಾರಂಟಿ ಸ್ವಯಂ ಸೇವಕ’ರಿಗೆ 100 ರಿಂದ 120 ಮನೆಗಳನ್ನು ಹಂಚಿಕೆ ಮಾಡುವುದು.
3. ಇದಕ್ಕೆ ತಗಲುವ ವೆಚ್ಚ ರೂ. 12.00 ಕೋಟಿಗಳನ್ನು ಗೃಹಲಕ್ಷ್ಮಿ ಯೋಜನೆಯ ಲೆಕ್ಕ ಶೀರ್ಷಿಕ: 2235-02-103-0-73(100)
ಒದಗಿಸಲಾಗಿರುವ ಅನುದಾನದಲ್ಲಿ ಭರಿಸತಕ್ಕದ್ದು.

4. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಿಆಸು ಇಲಾಖೆ (ಇ-ಆಡಳಿತ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳೊಂದಿಗೆ ಸಮಾಲೋಚಿಸಿ ಸಮೀಕ್ಷೆಯನ್ನು ಕೈಗೊಳ್ಳಲು ಪ್ರತಿ ಗ್ಯಾರಂಟಿ ಸ್ವಯಂ ಸೇವಕರಿಗೆ 100 ರಿಂದ 120 ಮನೆಗಳನ್ನು ಹಂಚಿಕೆ ಮಾಡಲು ಕಾರ್ಯವಿಧಾನವನ್ನು (Mechanism) ವಿನ್ಯಾಸಗೊಳಿಸುವುದು.

ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 19 ವೆಚ್ಚ -10/2024 ದಿನಾಂಕ: 20-02-2024ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM4 Mins Read

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM1 Min Read

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM1 Min Read
Recent News

ICC ಹಾಲ್ ಆಫ್ ಫೇಮ್‌ಗೆ ಎಂಎಸ್ ಧೋನಿ ಸೇರ್ಪಡೆ

09/06/2025 10:22 PM

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

09/06/2025 10:01 PM

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM
State News
KARNATAKA

ಬೆಂಗಳೂರಿನ ಜನತೆ ಗಮನಕ್ಕೆ: ಕಬ್ಬನ್ ಉದ್ಯಾನವನದಲ್ಲಿ ಈ ಸುರಕ್ಷತಾ ನಿಯಮ ಜಾರಿ, ಪಾಲನೆ ಕಡ್ಡಾಯ

By kannadanewsnow0909/06/2025 10:01 PM KARNATAKA 4 Mins Read

ಬೆಂಗಳೂರು: ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ…

ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭ | SOUTH WESTERN RAILWAY

09/06/2025 9:29 PM

ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕ

09/06/2025 9:22 PM

ಬಿಬಿಎಂಪಿಯಿಂದ ಈವರೆಗೆ 5 ಲಕ್ಷ ನಾಗರೀಕರಿಗೆ ‘ಅಂತಿಮ ಇ-ಖಾತಾ’ ವಿತರಣೆ | BBMP E-Khata

09/06/2025 9:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.