ಬೆಂಗಳೂರು : ರಾಜ್ಯ ಸರ್ಕಾರದ ‘ಗೃಹಲಕ್ಷ್ಮೀ’ ಯೋಜನೆಯಡಿ ನೋಂದಾಯಿಸಿಕೊಂಡಿರುವ ರಾಜ್ಯದ 1.21 ಕೋಟಿ ಮಹಿಳಾ ಫಲಾನುಭವಿಗಳ ಪೈಕಿ 1.12 ಕೋಟಿ ಫಲಾನುಭವಿ ಗಳಿಗೆ 2,000 ರು. ನೇರ ನಗದು ವರ್ಗಾವಣೆಯಾಗುತ್ತಿದ್ದು, ಇನ್ನು 8.20 ಲಕ್ಷ ಮಹಿಳೆಯರ ಖಾತೆಗೆ ನಗದು ವರ್ಗಾವಣೆ ಬಾಕಿ ಇದೆ. ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶತಿಳಿಸಿದ್ದಾರೆ.
ಉಜ್ಬೇಕಿಸ್ತಾನ್: ‘ಮೇಲ್ಛಾವಣಿ’ ಕುಸಿದು ಮೂವರು ಭಾರತೀಯ ಕಾರ್ಮಿಕರು ಸಾವು, 30 ಮಂದಿಗೆ ಗಾಯ
ಪ್ರತಿ ತಿಂಗಳ 15ನೇ ತಾರೀಖಿನ ನಂತರ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಯೋಜನೆಯಡಿ ನೋಂದಣಿಮಾಡಿಕೊಂಡಿರುವ ಫಲಾನುಭವಿಗಳಿಗೆ ಕೆವೈಸಿ ಅಷ್ಟೇಟ್, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದಿರುವುದು ಮತ್ತಿತರ ತಾಂತ್ರಿಕ ಕಾರಣಗಳಿಂದ ಖಾತೆಗೆ ಹಣ ಸಂದಾಯವಾಗಿಲ್ಲ.
ಶ್ರೀಮಂತರ ತೆರಿಗೆ ಮತ್ತು ಬಡವರ ಉನ್ನತಿಗಾಗಿ ಖರ್ಚು ಮಾಡುವುದು ನಮ್ಮ ಆರ್ಥಿಕತೆ: ಸಿಎಂ ಸಿದ್ದರಾಮಯ್ಯ
ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಪಡಿತರ ಚೀಟಿಯಲ್ಲಿ ಮನೆಯಯಜಮಾನ ಇರುವುದನ್ನು ಬದಲಾಯಿಸಿ, ಮಹಿಳೆಯನ್ನು ಯಜಮಾನಿಯನ್ನಾಗಿ ಮಾಡಿಸಿಕೊಂಡಿರುವ ತಿದ್ದುಪಡಿ ಮಹಿಳೆಯರಿಗೂ ಸೌಲಭ್ಯದೊರಕಿಲ್ಲ. ಅಂತಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ತಿಂಗಳಿಂದಲೇ ಧನ ಸಹಾಯ ಪಾವತಿ ಮಾಡಲಾಗುತ್ತದೆ ಎಂದು ಹೆಬ್ಬಾಳ್ಳರ್ ಉತ್ತರಿಸಿದ್ದಾರೆ.
‘ಬ್ರಾಹ್ಮಣ ವಿದ್ಯಾರ್ಥಿ’ಗಳ ಗಮನಕ್ಕೆ: ಮಾ.1ರವರೆಗೆ ‘ಸಾಂದೀಪನಿ ಶಿಷ್ಯವೇತನ’ಕ್ಕೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ