ಬೆಂಗಳೂರು : ಬಿಬಿಎಂಪಿ ವಿಧೇಯಕ ತಿದ್ದುಪಡಿಯಿಂದ ದೊಡ್ಡ ಬಿಲ್ಡರ್ ಗಳು ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
2024 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2020 ದ ಮೇಲೆ ಮಾತನಾಡಿದ ಅವರು, ಈ ಕಾಯ್ದೆ ತಿದ್ದುಪಡಿಯಿಂದ ಈಗಿರುವ ಬಿಲ್ಡರ್ ಗಳಿಗೆ ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಶ್ರೀಮಂತ ಬಿಲ್ಡರ್ ಪರವಾಗಿದೆ. ಇದರಲ್ಲಿ ಬಹಳ ದೊಡ್ಡ ಅವ್ಯವಹಾರ ನಡೆಯುತ್ತದೆ. ಇದನ್ನು ನಾವು ವಿರೋಧ ಮಾಡುತ್ತೇವೆ. ಇದನ್ನು ಉಪ ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು. ಇದರಿಂದ ರೈತರಿಗೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.
ನಮ್ಮ ಅವಧಿಯಲ್ಲಿಯೂ ಈ ಪ್ರಸ್ತಾವನೆ ಬಂದಿತ್ತು. ನಾವು ಅದನ್ನು ತಿರಸ್ಕರಿಸಿದ್ದೇವು. ಈಗಾಗಲೇ ಬೆಂಗಳೂರು ಯೋಜನಾರಹಿತ ನಗರ ಇದೆ. ಇನ್ನಷ್ಟು ಯೋಜನಾ ರಹಿತವಾಗಿ ಬೆಳೆಯುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. ಹೀಗಾಗಿ ತಿದ್ದುಪಡಿ ವಿಧೇಯಕವನ್ನು ವಿರೋಧಿಸುವುದಾಗಿ ಹೇಳಿದರು.
BREAKING: ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ‘ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ’ಗೆ ಭರ್ಜರಿ ಗೆಲುವು
BREAKING : ‘ಕ್ರಿಕೆಟ್’ಗೆ ಮರಳಲು ‘ರಿಷಭ್ ಪಂತ್’ ರೆಡಿ ; 2024ರ ‘IPL ಪಂದ್ಯಾವಳಿ’ಯಲ್ಲಿ ಭಾಗಿ : ವರದಿ