ವಾರಣಾಸಿ : ವಾರಣಾಸಿಯಲ್ಲಿ ಮಂಗಳವಾರ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
“ವಾರಣಾಸಿಯಲ್ಲಿ, ಕೆಲವು ಯುವಕರು ಕುಡಿದು, ಬೀದಿಗಳಲ್ಲಿ ಮಲಗಿರುವುದನ್ನ ಮತ್ತು ರಾತ್ರಿಯಲ್ಲಿ ನೃತ್ಯ ಮಾಡುತ್ತಿರುವುದನ್ನ ನಾನು ಗಮನಿಸಿದೆ. ಯುಪಿ (ಯುವಕರ) ಭವಿಷ್ಯವು ಮಾದಕವಾಗಿದೆ” ಎಂದು ರಾಹುಲ್ ಗಾಂಧಿ ಟೀಕಿಸಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14 ರಂದು ಮಣಿಪುರದ ತೌಬಾಲ್ನಿಂದ ಪ್ರಾರಂಭವಾಗಿ ಮಾರ್ಚ್ 20 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.
ಕಾಶಿ ಯುವಕರನ್ನ ಕುಡುಕರು ಎಂದು ಕರೆದ ರಾಹುಲ್ ಗಾಂಧಿ.!
2024ರ ಲೋಕಸಭಾ ಚುನಾವಣೆಗೂ ಮುನ್ನ 15 ರಾಜ್ಯಗಳ ಮೂಲಕ 6,700 ಕಿ.ಮೀ ದೂರವನ್ನ ಕ್ರಮಿಸುವ ಗುರಿಯನ್ನ ಕಾಂಗ್ರೆಸ್ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಹೊಂದಿದೆ. ಇದಲ್ಲದೆ, ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಕಪ್ಪು ಬಾವುಟಗಳನ್ನ ತೋರಿಸಲಾಗಿದೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ವೀಡಿಯೊದಲ್ಲಿ, ಸೈರನ್ಗಳ ಶಬ್ದಗಳ ನಡುವೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಹಾದುಹೋಗುತ್ತಿದ್ದಂತೆ ಕಟ್ಟಡದ ಟೆರೇಸ್ನಲ್ಲಿ ಇಬ್ಬರು ಕಪ್ಪು ಬಾವುಟಗಳನ್ನ ಬೀಸುತ್ತಿರುವುದನ್ನ ತೋರಿಸಲಾಗಿದೆ.
राहुल गाँधी ने यूपी के युवा शराब पीकर सड़क पर नाच रहा है…@RahulGandhi pic.twitter.com/9d1PojyYCO
— Anup Gupta (@anoopphr) February 20, 2024
BREAKING : ‘ಕ್ರಿಕೆಟ್’ಗೆ ಮರಳಲು ‘ರಿಷಭ್ ಪಂತ್’ ರೆಡಿ ; 2024ರ ‘IPL ಪಂದ್ಯಾವಳಿ’ಯಲ್ಲಿ ಭಾಗಿ : ವರದಿ
ವಿಧಾನಪರಿಷತ್ ‘ಬೆಂಗಳೂರು ಶಿಕ್ಷಕರ ಕ್ಷೇತ್ರ’ದ ಉಪ ಚುನಾವಣೆ: ಯಾರಿಗೆ ಎಷ್ಟು ಮತ? ಇಲ್ಲಿದೆ ಡೀಟೇಲ್ಸ್
‘ರಷ್ಯಾ ಎಂದಿಗೂ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆ ತಂದಿಲ್ಲ’ : ಸಚಿವ ಜೈಶಂಕರ್