ಬೆಂಗಳೂರು: ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆ ಜಾರಿಯ ಬಳಿಕ, ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ರಾಜ್ಯದ ಜನತೆಯ ಅನಾರೋಗ್ಯ ಸಮಸ್ಯೆ ನಿವಾರಣೆಗಾಗಿ ದಿನಕ್ಕೆ 2 ಬಾರಿ ಉಚಿತ ಯೋಗ ತರಬೇತಿ ನೀಡುವುದಾಗಿದೆ.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಯುಷ್ ಚಿಕಿತ್ಸಾಲಯಗಳಲ್ಲಿ ಆಯುಷ್ಮಾನ್ ಮಂದಿರಗಳ ಮೂಲಕ ನುರಿತ ಯೋಗ ತರಬೇತುದಾರರಿಂದ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದಿದ್ದಾರ.
ಒಟ್ಟಾರೆಯಾಗಿ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುಷ್ಮಾನ್ ಚಿಕಿತ್ಸಾಲಯಗಳ ಮೂಲಕ ಜನರಿಗೆ ಯೋಗ ತರಬೇತಿಯನ್ನು ದಿನಕ್ಕೆ 2 ದಿನ ನೀಡಲಾಗುತ್ತದೆ. ಈ ಮೂಲಕ ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ವಹಿಸಿದೆ.